Wednesday, January 22, 2025

ಮಾನನಷ್ಟ ಮೊಕದ್ದಮೆ: ಯಾವ ಕಾರಣಕ್ಕು ರಾಜಿಯಾಗುವ ಮಾತೆ ಇಲ್ಲ- ನಟ ಸುದೀಪ್​

ಬೆಂಗಳೂರು : ಸಿನಿಮಾ ಇಂಡಸ್ಟ್ರಿಯಲ್ಲಿ 22 ವರ್ಷಗಳ ನನ್ನ ವರ್ಚಸ್ಸಿಗೆ ದಕ್ಕೆಯಾಗಿದ್ದು ರಾಜಿ ಮಾಡಿಕೊಳ್ಳುವ ಮಾತೇ ಇಲ್ಲ ಎಂದು ಹೇಳಿದ ನಟ ಕಿಚ್ಚ ಸುದೀಪ್​.

ನಟ ಸುದೀಪ್​ ಹಾಗೂ  ನಿರ್ಮಾಪಕ ಕುಮಾರ್ ನಡುವೆ ನಡೆದ ಜಟಾಪಟಿ ಪ್ರಕರಣಕ್ಕೆ ಸಂಬಂಧಿಸಿ ಎಸಿಎಂಎಂ ಕೋರ್ಟ್ ನಿಂದ ಇಂದು ಸಮನ್ಸ್​ ಜಾರಿಮಾಡುವ ಸಾಧ್ಯತೆ ಇದೆ.

ಇದನ್ನು ಓದಿ: ರಾಷ್ಟ್ರಗೀತೆಗೆ ಹೊಸ ಸಂಗೀತ ಸರ್ಶ: ಸ್ವತಂತ್ರ್ಯ ದಿನಾಚರಣೆಗೆ ಬಿಡುಗಡೆ

ಸಿನಿಮಾದಲ್ಲಿ ನಟಿಸುವ ಸಂಬಂಧ ನಿರ್ಮಾಮಕ ಎಂ.ಎನ್. ಕುಮಾರ್ ಮಾಡಿದ್ದ ಆರೋಪಗಳಿಗೆ ಬೇಸರ ವ್ಯಕ್ತಪಡಿಸಿದ ನಟ ಸುದೀಪ್​, ನಿರ್ಮಾಪಕ ಕುಮಾರ್​ ಹಾಗು ಎಂ.ಎನ್​ ಸುರೇಶ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು, ಈ ಪ್ರಕರಣದ ವಿಚಾರಣೆ ಸಂಬಂಧ ಗುರುವಾರ ಎಸಿಎಂಎಂ ಕೋರ್ಟ್​ಗೆ ಹಾಜರಾದ ನಟ ಸುದೀಪ್​, ತಮ್ಮ ಹೇಳಿಕೆಯನ್ನು ದಾಖಲಿಸಿದ್ದರು.

ಸಿನಿ ಇಂಡಸ್ಟ್ರಿಯಲ್ಲಿ 22 ವರ್ಷ ಗಳಿಸಿದ್ದ ವರ್ಚಸ್ಸಿಗೆ ಧಕ್ಕೆಯಾಗಿದೆ. ಈ ಪ್ರಕರಣದಲ್ಲಿ ರಾಜೀ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಕೋರ್ಟ್ ಮುಂದೆ ಹೇಳಿಕೆಯನ್ನು ನಟ ಸುದೀಪ್ ಸ್ಪಷ್ಟಪಡಿಸಿದ್ದಾರೆ.

RELATED ARTICLES

Related Articles

TRENDING ARTICLES