Monday, December 23, 2024

ಅಂಗನವಾಡಿ ಪೌಷ್ಟಿಕ ಆಹಾರದಲ್ಲಿ ಸತ್ತ ಜಿರಳೆಗಳು: ಕ್ರಮಕ್ಕೆ ಒತ್ತಾಯ

ದೇವನಹಳ್ಳಿ: ಅಂಗನವಾಡಿ ಕೇಂದ್ರಕ್ಕೆ ಪೂರೈಕೆ ಮಾಡಲಾಗಿರುವ ಪೌಷ್ಟಿಕ ಆಹಾರ ಪೊಟ್ಟಣಗಳಲ್ಲಿ ಸುಮಾರು 30 ಕ್ಕೂ ಹೆಚ್ಚು ಸತ್ತು ಒಣಗಿರುವ ಜಿರಳೆಗಳು ಪತ್ತೆಯಾಗಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿರುವ ಘಟನೆ ತಾಲ್ಲೂಕಿನ ವಿಜಯಪುರ ಹೋಬಳಿಯ ಹಾರೋಹಳ್ಳಿ ಗ್ರಾಮ ಪಂಚಾಯ್ತಿ ಬುಳ್ಳಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ಕೇಳಿ ಬಂದಿದೆ.

ಆಹಾರದ ಪೊಟ್ಟಣಗಳನ್ನು ಮೂಟೆಗಳಲ್ಲಿ ಸರಬರಾಜು ಮಾಡುಲಾಗುತ್ತಿದ್ದು. ನಮಗೆ ವಿತರಿಸಿರುವ ಆಹಾರದ ಪೊಟ್ಟಣಗಳಲ್ಲಿ ಗಳಲ್ಲಿ ಆಗಸ್ಟ್ 28ರ ವರೆಗೂ ಉಪಯೋಗ ಮಾಡಲು ಅವಕಾಶವಿದೆ. ನಾವು ಪಾಕೆಟ್ ಸಮೇತ ವಿತರಣೆ ಮಾಡಿದ್ದೇವಷ್ಟೆ. ಜಿರಳೆಗಳು ಸೇರಿಕೊಂಡಿರುವುದಕ್ಕೂ ನಮಗೂ ಸಂಬಂಧವಿಲ್ಲ ಎಂದು ಇಲ್ಲಿನ ಅಂಗನವಾಡಿ ಸಿಬ್ಬಂದಿ ಹೇಳುತ್ತಿದ್ದಾರೆ.

ಈ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ನಟರಾಜ್​ ಪ್ರತಿಕ್ರಿಯೆ ನೀಡಿದ್ದು, ಜಿಲ್ಲೆಯ ದೇವನಹಳ್ಳಿಯ ಆಹಾರ ತಯಾರಿಕಾ ಘಟಕದಲ್ಲಿ ರಾಜ್ಯದಲ್ಲೇ ಉತ್ತಮ ಗುಣಮಟ್ಟದಿಂದ ಆಹಾರ ತಯಾರಿಸುತ್ತಿದ್ದಾರೆ. ಇದುವರೆಗೂ ಯಾವುದೇ ದೂರು ಬಂದಿರಲಿಲ್ಲ. ಪ್ಯಾಕೆಟ್‌ನಲ್ಲಿ ಜಿರಳೆಗಳು ಕಾಣಿಸಿಕೊಂಡಿರುವ ಬಗ್ಗೆ ಪರಿಶೀಲನೆ ಮಾಡಿಸಲಾಗುವುದು ಎಂದು ಹೇಳಿದ್ದಾರೆ.

ಕ್ರಮಕ್ಕೆ ಒತ್ತಾಯ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೂಲಕ ಅಂಗನವಾಡಿಗಳಿಗೆ ಸರಬರಾಜು ಮಾಡುತ್ತಿರುವ ಪೂರಕ ಪೌಷ್ಟಿಕ ಆಹಾರದ ಪೊಟ್ಟಣಗಳು ಪಟ್ಟಣದಲ್ಲೇ ತಯಾರಾಗಿದೆ. 112ನೇ ಬ್ಯಾಚ್‌ನ ಒಂದೇ ಪಾಕೇಟ್ ನಲ್ಲಿ 30ಕ್ಕೂ ಹೆಚ್ಚು ಜಿರಳೆಗಳು ಸತ್ತಿವೆ. ಆಹಾರ ತಯಾರಿಕೆ ಘಟಕದಲ್ಲಿನ ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ಈ ರೀತಿ ಆಗಿದೆ. ಆದ್ದರಿಂದ ಸಂಬಂಧ ಪಟ್ಟ ಅಧಿಕಾರಿಗಳು ಆಹಾರ ತಯಾರಿಕಾ ಘಟಕಕ್ಕೆ ಭೇಟಿ ನೀಡಿ, ಗುಣಮಟ್ಟ ಮತ್ತು ಸ್ವಚ್ಛತೆ ಕುರಿತು ಪರಿಶೀಲಿಸ ಬೇಕು ಎಂಬ ಒತ್ತಾಯ ಕೇಳಿಬಂದಿದೆ.

RELATED ARTICLES

Related Articles

TRENDING ARTICLES