ಮಂಡ್ಯ : ರೈತನೊರ್ವನ ಜಮೀನಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು ಸುಮಾರು 40 ಕ್ಕೂ ಹೆಚ್ಚು ಟನ್ ಕಬ್ಬು ಬೆಳೆ ಬೆಂಕಿಗೆ ಆಹುತಿ ಘಟನೆ ಕೆ. ಆರ್. ಪೇಟೆ ತಾಲೂಕಿನ ಆಲಂಬಾಡಿ ಕಾವಲ್ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರೈತ ವಿಶ್ವನಾಥ ಎಂಬುವವರಿಗೆ ಸೇರಿದ್ದ ಸುಮಾರು 1.35 ಎಕರೆ ಜಮೀನಿನಲ್ಲಿ ಕಬ್ಬು ಬೆಳೆದಿದ್ದರು. ನಿನ್ನೆ ತಡರಾತ್ರಿ ಕಬ್ಬು ಬೆಳೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಸಂಪೂರ್ಣ ಬೆಳೆ ನಾಶವಾಗಿದೆ. ಫಸಲು ಕಳೆದುಕೊಂಡು ರೈತ ಕಂಗಾಲು.
ಇದನ್ನು ಓದಿ : ರೀಲ್ಸ್ ಗೀಳು : ಪತ್ನಿಯನ್ನು ಕೊಂದು ನದಿಗೆ ಎಸೆದ ಪತಿ ಮತ್ತು ಮಾವ!
ಜಮೀನಿನಲ್ಲಿ ರೈತ ಕಷ್ಟ ಪಟ್ಟು ಬೆಳೆದಿದ್ದ ಬೆಳೆ ಇನ್ನೇನು ಫಸಲು ಕೈಗೆ ಬರುವಂತೆ ಇತ್ತು. ಈ ವೇಳೆ ಇಂತಹ ದುರ್ಘಟನೆ ನೆಡೆದಿದ್ದು, ರೈತನ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿದ್ದು, ಬೆಂಕಿಯನ್ನು ನಂದಿಸಿದ್ದಾರೆ.
ಈ ಘಟನಾ ಹಿನ್ನೆಲೆ ಬೆಳೆ ನಾಶಕ್ಕೆ ಪರಿಹಾರ ನೀಡಿ ಎಂದು ತಾಲೂಕು ಆಡಳಿತಕ್ಕೆ ಮನವಿ ಮಾಡಿಕೊಂಡ ರೈತ ವಿಶ್ವನಾಥ.