Wednesday, January 22, 2025

60 ಅಡಿ ಆಳಕ್ಕೆ ಬಿದ್ದ ಕಾಡುಕೋಣದ ಮರಿ!:ರಕ್ಷಣೆ

ಶಿವಮೊಗ್ಗ : ತೆರೆದ ಬಾವಿಗೆ 2 ವರ್ಷದ ಕಾಡುಕೋಣದ ಮರಿಯೊಂದು ಆಕಸ್ಮಿಕವಾಗಿ ಬಿದ್ದು ಜೀವನ್ಮರಣ ಹೋರಾಟ ನಡೆಸುತ್ತಿದ್ದ ಮರಿಯನ್ನು ರಕ್ಷಿಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಇದನ್ನೂ ಓದಿ: ಕೊಬ್ಬರಿಗೆ ಬೆಂಬಲ ಬೆಲೆ ಏರಿಸುವಂತೆ ಒತ್ತಾಯಿಸಿ ಇಂದು ಸ್ವಯಂ ಪ್ರೇರಿತ ಬಂದ್​!

60 ಅಡಿ ಆಳದ ಬಾವಿಗೆ ಬಿದ್ದಿದ್ದ ಕಾಡುಕೋಣದ ಮರಿಯನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆ ಹಾಗು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಸಕಾಲಕ್ಕೆ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿಗಳು, ಕೋಣದ ಮರಿಯ ಕೋಡಿಗೆ ಹಗ್ಗ ಹಾಕಿ ಮುಳುಗದಂತೆ ಎಚ್ಚರ ವಹಿಸಿದ್ದಾರೆ.

ವನ್ಯಜೀವಿ ವಿಭಾಗದ ಅರಿವಳಿಕೆ ತಜ್ಞರು ಸ್ಥಳಕ್ಕಾಗಮಿಸಿ, ಕಾಡಿಕೋಣ ಮರಿಗೆ ಅರವಳಿಕೆ ನೀಡಿದ್ದಾರೆ, ಬಳಿಕ ಅಗ್ನಿಶಾಮಕ ಸಿಬ್ಬಂದಿಗಳು ಬಾವಿಗೆ ಇಳಿದು, ಕರುವಿನ ಹೊಟ್ಟೆಗೆ ದೃಡವಾದ ಬೆಲ್ಟ್ ಬಿಗಿದ ಮೇಲೆ ಕ್ರೇನ್ ಮೂಲಕ ಕಾಡುಕೋಣದ ಕರುವನ್ನು ಯಶಸ್ವಿ ಕಾರ್ಯಾಚರಣೆ ಮೂಲಕ ಮೇಲಕ್ಕೆತ್ತಿ, ರಕ್ಷಿಸಿದ್ದಾರೆ.

RELATED ARTICLES

Related Articles

TRENDING ARTICLES