ಉಡುಪಿ: ಸೌಜನ್ಯ ಪ್ರಕರಣದ ನಿರ್ದೋಷಿಯಾದ ಸಂತೋಷ್ ರಾವ್ ಮನೆಗೆ ಭೇಟಿ ನೀಡಿದ ಒಡನಾಡಿ ಸಂಸ್ಥೆ ಸ್ಟಾನ್ಲಿ ಮತ್ತು ತಂಡ, ಶೀಥಿಲಾವಸ್ಥೆ ಸ್ಥಿತಿಯಲ್ಲಿದ್ದ ಮನೆಯನ್ನು ಸ್ವಚ್ಚಗೊಳಿಸಿ ಸಾಂತ್ವನ ಹೇಳಿದರು.
ಇದನ್ನೂ ಓದಿ:ಮಗಳನ್ನು ಶಾಲೆಗೆ ಬಿಡಲು ಹೋದ ತಂದೆ ಅಪಘಾತದಲ್ಲಿ ಸಾವು:ಮಗಳಿಗೆ ಗಂಭೀರ ಗಾಯ !
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೈಲೂರಿನಲ್ಲಿರುವ ನಿರಪರಾಧಿ ಸಂತೋಷ್ ರಾವ್ ಮನೆಗೆ ಒಡನಾಡಿ ಸಂಸ್ಥೆ ಭೇಟಿ ನೀಡಿ, ಕಳೆದ 10 ವರ್ಷಗಳಿಂದ ಪಾಳು ಬಿದ್ದ ಮನೆಯ ದುರಸ್ತಿ ಕಾರ್ಯ ಕೈಗೊಂಡು ಮನೆಯೊಳಗೆ ಬೆಳೆದಿದ್ದ ಹುತ್ತ ತೆರವುಗೊಳಿಸಿ, ಶಿಥಿಲವಾಸ್ಥೆಯಲ್ಲಿದ್ದ ಮನೆಯನ್ನು ಸ್ವಚ್ಚ ಗೊಳಿಸಿ ಮನೆಗೆ ಸುಣ್ಣ ಬಣ್ಣ ಬಳಿದು ಕಾಯಕಲ್ಪ ನೀಡಿತು.
ಪಾಳು ಬಿದ್ದ ಮನೆಯಲ್ಲಿ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದ ಸಂತೋಷ್ ರಾವ್ ತಂದೆ ಸುಧಾರಕರ್ ರಾವ್, ಮಗನ ಕೊರಗಿನಿಂದ ಖಿನ್ನತೆಗೊಳಾಗಿ ಮನೆ ಮನದ ಪರಿವೆ ಇಲ್ಲದೆ ಮೂಲೆ ಸೇರಿದ್ದರು, ಕೆದರಿದ ಕೂದಲು, ಗಡ್ಡ ಸ್ವಚ್ಚಗೊಳಿಸಿ ಹೊಸ ಉಡುಗೆ ತೊಡೆಸಿ ಶಿಕ್ಷಕ ಸುಧಾಕರ್ ರಾವ್ ಗೆ ಪಾದ ಪೂಜೆ ಮಾಡಿ, ಸಾಂತ್ವನ ಹೇಳಲಾಯಿತು. ಜೊತೆಗೆ, ಬದುಕಿನ ಭರವಸೆ ಒಡನಾಡಿ ತಂಡದ ಸದಸ್ಯರು ತುಂಬಿದರು.
ಸೌಜನ್ಯ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಎಂದು ಬಿಂಬಿಸಲಾಗುತ್ತಿದ್ದ ಸಂತೋಷ್ ರಾವ್ ನನ್ನು ಇತ್ತೀಚೆಗೆ ಸಿಬಿಐ ಕೋರ್ಟ್ ನಿರಪರಾಧಿ ಎಂದು ಘೋಷಣೆ ಮಾಡಿತ್ತು. ಈ ಬೆನ್ನಲ್ಲೆ ನಿಜವಾದ ಅಪರಾಧಿ ಕಂಡು ಹಿಡಿಯುವಂತೆ ರಾಜ್ಯದ ಹಲವೆಡೆ ಕೂಗು ಕೇಳಿಬರುತ್ತಿದೆ.