ಬೆಂಗಳೂರು : ನನ್ನ ಸುಧೀರ್ಘ ಅನುಭವದಲ್ಲಿ ನಾನು ಪ್ರಜಾಪ್ರಭುತ್ವ ಮೌಲ್ಯಗಳ ಅಧಃಪತನವನ್ನು ಕಂಡಿಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಸಂಸತ್ ಅಧಿವೇಶನದ ಬಗ್ಗೆ ಹೆಚ್.ಡಿ ದೇವೇಗೌಡ ಅವರು ಟ್ವೀಟ್ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ನನಗೆ ಆರೋಗ್ಯ ಸರಿಯಿಲ್ಲ. ಆದರೂ ನಾನು ಸಂಸತ್ತಿಗೆ ಬಂದಿದ್ದೇನೆ. ಆದರೆ, ಇಲ್ಲಿ ನಡೆಯುತ್ತಿರುವ ಘಟನೆಗಳಿಂದ ನಾನು ತುಂಬಾ ನಿರಾಶೆಗೊಂಡಿದ್ದೇನೆ. ನನ್ನ ಸುಧೀರ್ಘ ರಾಜಕೀಯ ಅನುಭವದಲ್ಲಿ ಇಂಥ ಅಧಃಪತನ ಕಂಡಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದ್ದಾರೆ.
I came to attend Parliament despite ill-health, but have been very disappointed by what is happening. From my long experience I say this is a new low. Democracy can be saved only if everybody maintains dignity and decorum. 1/2
— H D Deve Gowda (@H_D_Devegowda) August 10, 2023
ಮುಂದುವರಿದು, ಪ್ರತಿಯೊಬ್ಬರೂ ಗೌರವ ಮತ್ತು ಸಭ್ಯತೆಯನ್ನು ಕಾಪಾಡಿಕೊಳ್ಳಬೇಕಿದೆ. ಆಗ ಮಾತ್ರ ಪ್ರಜಾಪ್ರಭುತ್ವವನ್ನು ಉಳಿಸಬಹುದು ಎಂದು ದೇವೇಗೌಡರು ನುಡಿದಿದ್ದಾರೆ.
ಗದ್ದಲ.. ಕೋಲಾಹಲ
ಅವಿಶ್ವಾಸ ನಿರ್ಣಯದ ಭಾಷಣದ ನಂತರ ಲೋಕಸಭೆಯಲ್ಲಿ ಭಾರೀ ಗದ್ದಲ, ಕೋಲಾಹಲ ಉಂಟಾಯಿತು. ಸಂಸದ ಅಧೀರ್ ನೀರವ್ ರಂಜನ್ ಅವರು ಪ್ರಧಾನಿ ಮೋದಿ ಅವರನ್ನು ನೀರವ್ ಮೋದಿಗೆ ಹೋಲಿಸಿದರು. ಇದಕ್ಕೆ ಬಿಜೆಪಿ ಸಂಸದರು ಆಕ್ಷೇಪ ವ್ಯಕ್ತಪಡಿಸಿದರು.