Wednesday, January 22, 2025

ಕೊಬ್ಬರಿಗೆ ಬೆಂಬಲ ಬೆಲೆ ಏರಿಸುವಂತೆ ಒತ್ತಾಯಿಸಿ ಇಂದು ಸ್ವಯಂ ಪ್ರೇರಿತ ಬಂದ್​!

ತುಮಕೂರು: ಕೊಬ್ಬರಿಗೆ ಬೆಂಬಲ ಬೆಲೆಯನ್ನು ನೀಡುವಂತೆ ಒತ್ತಾಯಿಸಿ ಇಂದು ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ವತಿಯಿಂದ ಬಂದ್ ಗೆ ಕರೆ ನೀಡಲಾಗಿದೆ.

ಇದನ್ನೂ ಓದಿ: ಪಿಯುಸಿ ಪೂರಕ ಪರೀಕ್ಷೆ ನೋಂದಣಿಗೆ ಅವಧಿ ವಿಸ್ತರಣೆ

ತುಮಕೂರಿನಲ್ಲಿ ಅತಿ ಹೆಚ್ಚು ತೆಂಗು ಬೆಳೆಯುವ ಪ್ರದೇಶ ಹೊಂದಿದ್ದು ಕಲ್ಪತರ ನಾಡು ಎಂದು ಸುಪ್ರಸಿದ್ದಿ ಪಡೆದಿದೆ. 18 ಸಾವಿರಕ್ಕೆ ಮಾರಾಟವಾಗುತ್ತಿದ್ದ ಪ್ರತಿ ಕ್ವಿಂಟಾಲ್​ ಕೊಬ್ಬರಿ ಕಳೆದ 8 ತಿಂಗಳಿನಿಂದ 7 ಸಾವಿರಕ್ಕೆ ಇಳಿದಿದ್ದು ತೆಂಗು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ರೈತ ಸಂಘಟನೆಗಳು ತಿಪಟೂರು ನಗರದ ಕೋಡಿ ಸರ್ಕಲ್​ನಲ್ಲಿ ಪ್ರತಿಭಟನೆ ನಡೆಸಲಿದೆ.

ಪ್ರತಿ ಕ್ವಿಂಟಲ್​ ಕೊಬ್ಬರಿಗೆ 20 ಸಾವಿರ ಬೆಂಬಲ ಬೆಲೆ ನೀಡುವಂತೆ ಬೇಡಿಕೆ ಇಟ್ಟು ಇಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ರ ವರೆಗೆ ಸ್ವಯಂಪ್ರೇರಿತ ಬಂದ್​ ಗೆ  ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ಸಂಘಟನೆಗಳು ಕರೆ ನೀಡಿದೆ.

RELATED ARTICLES

Related Articles

TRENDING ARTICLES