Sunday, December 22, 2024

ಪಿಯುಸಿ ಪೂರಕ ಪರೀಕ್ಷೆ ನೋಂದಣಿಗೆ ಅವಧಿ ವಿಸ್ತರಣೆ

ಬೆಂಗಳೂರು: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ-2ಕ್ಕೆ ಪುನರಾವರ್ತಿತ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಳ್ಳುವ ಅವಧಿಯನ್ನು ವಿಸ್ತರಣೆ ಮಾಡಲಾಗಿದ್ದು ಎರಡು ದಿನ ಹೆಚ್ಚುವರಿಯಾಗಿ ಸಮಯ ಸಿಕ್ಕಂತಾಗಿದೆ.

ಇದನ್ನು ಓದಿ : 1,159 ಕೋಟಿ ಆದಾಯ ತೆರಿಗೆ ಪಾವತಿಸಿದ BCCI

ಇದಕ್ಕೂ ಮುನ್ನ ನೋಂದಣಿಗೆ ಆಗಸ್ಟ್​ 10 ಕೊನೆಯ ದಿನವಾಗಿತ್ತು. ಇದೀಗ  ಪುನರಾವರ್ತಿತ ವಿದ್ಯಾರ್ಥಿಗಳ ನೋಂದಣಿಯನ್ನು ಆಗಸ್ಟ್​ 12 ರ ವರೆಗೆ ವಿಸ್ತರಿಸಲಾಗಿದೆ.

ವಿದ್ಯಾರ್ಥಿಗಳ ನೋಂದಣಿ ಬಳಿಕ ಕಾಲೇಜುವಾರು ಕ್ರೋಡೀಕೃತ ವಿದ್ಯಾರ್ಥಿಗಳ ಪಟ್ಟಿ, ಹಣ ಪಾವತಿಸಿದ ಮೂಲ ಚಲನ್ ಹಾಗೂ ಮುಚ್ಚಳಿಕೆ ಪತ್ರವನ್ನು ಖುದ್ದಾಗಿ ಮಂಡಳಿಗೆ ಸಲ್ಲಿಸುವಂತೆ ಕಾಲೇಜು ಪ್ರಾಂಶುಪಾಲರಿಗೆ ಸೂಚನೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES