Sunday, December 22, 2024

ಮನೆ ಬಾಡಿಗೆ ಕೇಳಿದಕ್ಕೆ ಮಹಿಳೆ ಮೇಲೆ ಹಲ್ಲೆ ಮಾಡಿದ ಬಾಡಿಗೆದಾರ

ಬೆಂಗಳೂರು : ಮನೆ ಬಾಡಿಗೆ ಕೇಳಿದಕ್ಕೆ ಮಹಿಳೆ ಬಳಿ ಕಿರಿಕ್ ತೆಗೆದು ಹಲ್ಲೆ ಮಾಡಿರುವ ಬಾಡಿಗೆದಾರ ಘಟನೆ ನಗರದ ಮುನೇಶ್ವರನಗರದಲ್ಲಿ ನಡೆದಿದೆ.

ಫಯಾಜ್ ಎಂಬುವರ ಮನೆಯಲ್ಲಿ ಶ್ರೀದೇವಿ ಹಲ್ಲೆ ಒಳಗಾದ ಮಹಿಳೆ, ವಾಸವಾಗಿದ್ದಳು. ಮನೆ ಮಾಲೀಕ ವಿದೇಶದಲ್ಲಿ ನೆಲೆಸಿದ್ದು,  ಮನೆಯ ಜವಬ್ದಾರಿಯನ್ನು ಶ್ರೀದೇವಿಗೆ ವಹಿಸಿದ್ದ ಫಯಾಜ್. ಅದೇ ನಿವಾಸದಲ್ಲಿ ನಜೀರ್ ಎಂಬಾತ ಕೂಡ ವಾಸವಾಗಿದ್ದು, ಮೂರು ತಿಂಗಳಿನಿಂದ ಬಾಡಿಗೆ ಹಣ ನೀಡದೆ ಸತಾಯಿಸುತ್ತಿದ್ದ.

ಇದನ್ನು ಓದಿ : ಮಲ್ಪೆ ಬಂದರಿನ ನೀರಿಗೆ ಬಿದ್ದ 1.5 ಲಕ್ಷದ ಐಫೋನ್ ಹುಡುಕಿಕೊಟ್ಟ ಮುಳುಗುತಜ್ಞ

ಈ ಹಿನ್ನೆಲೆ ನಜೀರ್ ಬಳಿ ಮನೆ ಬಾಡಿಗೆ ಕಟ್ಟುವಂತೆ ಜೋರು ಧ್ವನಿಯಲ್ಲಿ ಕೇಳಿದ ಶ್ರೀದೇವಿ.

ಈ ವಿಚಾರ ನಜೀರ್ ಪುತ್ರ ಸದ್ದಾಂಗೆ ತಿಳಿದಿದ್ದು, ಕೋಪಿತಗೊಂಡ ಸದ್ದಾಂ ಮಹಿಳೆ ಜೊತೆ ಕಿರಿಕ್ ತೆಗೆದು ಚಾಕುವಿನಿಂದ ಮುಖ, ಕೈ ಕೊಯ್ದು ಹಲ್ಲೆ ಮಾಡಿದ್ದಾನೆ. ಘಟನಾ ಸಂಬಂಧ ಬಂಡೇಪಾಳ್ಯ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ದೂರು ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿದ ಪೋಲಿಸರು.

 

RELATED ARTICLES

Related Articles

TRENDING ARTICLES