Thursday, January 23, 2025

ಉತ್ತಮ ಸಮಾಜ ಕಟ್ಟಲು ಕೇವಲ ಶಾಸಕ, ಸಂಸದರಿಂದ ಆಗಲ್ಲ: ಯು.ಟಿ ಖಾದರ್

ವಿಜಯಪುರ: ನಾನು ಸಭಾಧ್ಯಕ್ಷ ಸ್ಥಾನದಲ್ಲಿ ಕುಳಿತ ಬಳಿಕ ನನಗೆ ಯಾವುದೇ ಪಕ್ಷದ ಸದಸ್ಯನು ದೂರು ನೀಡಿಲ್ಲ ಎಂದು ಎಂದು ವಿಧಾನಸಭಾ ಸ್ಪೀಕರ್​ ಯು.ಟಿ ಖಾದರ್ ಅವರು ಗುರುವಾರ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ಪೇಡಿಸಿಎಂ ಮತ್ತು ಪೇಸಿಎಸ್​ ಅಭಿಯಾನಕ್ಕೆ ಮುಂದಾದ ಬಿಜೆಪಿ ಪಕ್ಷ!

ವರ್ಗಾವಣೆ ದಂಧೆ ವಿಚಾರವಾಗಿ ಸಚಿವರ ವಿರುದ್ಧ ರಾಜ್ಯಪಾಲರಿಗೆ ಪತ್ರ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯಪುರದ ಸಿಂದಗಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಇದು ಸರ್ಕಾರಕ್ಕೆ ಸಂಬಂಧಿಸಿದ ವಿಚಾರ ಅದಕ್ಕೆ ಸರ್ಕಾರವಿದೆ, ಪ್ರತಿಪಕ್ಷವಿದೆ. ಇದು ಅವರ ಅವರಿಗೆ ಸಂಬಂಧಿಸಿದ ವಿಚಾರ ಎಂದು ಹೇಳಿದರು.

ಇದೇ ವೇಳೆ ಮಂಗಳೂರು ಗಲಭೆ ವಿಚಾರದಲ್ಲಿ ಕಾಂಗ್ರೆಸ್-ಬಿಜೆಪಿ ಯಾವಾಗಲೂ ಸದ್ದು ಮಾಡುತ್ತೆ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಯು.ಟಿ ಖಾದರ್ ಅವರು, ಮಂಗಳೂರು ವಿಚಾರದಲ್ಲಿ ಆ ಪಕ್ಷ ಈ ಪಕ್ಷ ಯಾಕೆ ಅಂತೀರಾ? ಸದ್ದು ಮಾಡುವವರು ಮಾಧ್ಯಮದವರೇ ಅಲ್ವಾ? ಮಾಧ್ಯಮದವರು ಒಳ್ಳೆ ವಿಚಾರ ಸದ್ದು ಮಾಡಿದ್ರೆ ಒಳ್ಳೆ ವಿಚಾರ ಸದ್ದು ಆಗುತ್ತೆ. ಸಣ್ಣ ಪುಟ್ಟ ವಿಚಾರವೂ ಬರ್ತದೆ. ಉತ್ತಮ ಸಮಾಜ ಕಟ್ಟಬೇಕಾದ್ರೆ ಕೇವಲ ಶಾಸಕರು, ಸಂಸದರಿಂದ ಆಗಲ್ಲ. ಶಾಸಕರು, ಸಂಸದರು, ಅಧಿಕಾರಿಗಳು, ಸಂಘ ಸಂಸ್ಥೆಗಳು, ಜನಸಾಮಾನ್ಯರ ಪಾತ್ರವೂ ಮುಖ್ಯ ಎಂದು ಹೇಳಿದರು.

RELATED ARTICLES

Related Articles

TRENDING ARTICLES