Tuesday, December 3, 2024

ಮಂಗನ ಕಾಟಕ್ಕೆ ಬೇಸತ್ತ ಗ್ರಾಮಸ್ಥರು; ಮೂವರಿಗೆ ಗಂಭೀರ ಗಾಯ

ಬೀದರ್ : ಹುಚ್ಚು ಮಂಗವೊಂದು ಮೂವರು ವ್ಯಕ್ತಿಗಳ ಮೇಲೆ ದಾಳಿ ಮಾಡಿದ್ದು, ಗ್ರಾಮದಲ್ಲಿ ಮಂಗಕ್ಕೆ ಹೆದರಿ ಮನೆಯಿಂದ ಆಚೆ ಬರಲು ಹೆದರುತ್ತಿರುವ ಗ್ರಾಮಸ್ಥರು ಘಟನೆ ಹುಮನಾಬಾದ ತಾಲೂಕಿನ ಘೋಡವಾಡಿ ಗ್ರಾಮದಲ್ಲಿ ನಡೆದಿದೆ.

ಕಳೆದ ನಾಲ್ಕು ದಿನಗಳಿಂದ ಮಂಗನ ಕಾಟಕ್ಕೆ ಜನರು ಭಯದಿಂದ ಓಡಾಡುವ ಪರಿಸ್ಥಿತಿ ಎದುರಾಗಿದೆ. ಹುಚ್ಚು ಹಿಡಿದಿರುವ ಮಂಗವೊಂದು ಜನರು ಓಡಾಡುತ್ತಿರುವ ವೇಳೆ ಬೆನ್ನಟ್ಟಿ ದಾಳಿ ಮಾಡಿದ್ದು, ಗ್ರಾಮದಲ್ಲಿನ ಮೂವರು ಗಂಭೀರ ಗಾಯಕ್ಕೆ ಒಳಗಾಗಿದ್ದಾರೆ.

ಇದನ್ನು ಓದಿ : ನಾಳೆ ಜೈಲರ್​ ಸಿನಿಮಾ ಬಿಡುಗಡೆ: ಉದ್ಯೋಗಿಗಳಿಗೆ ರಜೆ ಜೊತೆಗೆ ಫ್ರೀ ಟಿಕೆಟ್​ ನೀಡಿದ ಕಂಪೆನಿ!

ಇನ್ನು ಕಾರ್ಮಿಕರು ಮತ್ತು ರೈತರು ಹೊಲಗಳಿಗೆ ತೆರಳಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿದಿನ ಮಂಗ ಕಾಟ ಕೊಡುತ್ತಿದ್ದು ಅದರಿಂದ ಬೇಸತ್ತ ಗ್ರಾಮಸ್ಥರು.ಹುಚ್ಚು ಮಂಗ ಜನರ ದೇಹದ ಮೇಲೆ ದಾಳಿ ಮಾಡುತ್ತಿದ್ದು, ಸಂಬಂಧಪಟ್ಟವರು ಬೇಗ ಮಂಗನ ಸೆರೆ ಹಿಡಿಯಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಈ ಹಿನ್ನೆಲೆ ಆದಷ್ಟು ಬೇಗ ಸೆರೆ ಹಿಡಿಯುವ ಪ್ರಯತ್ನ ಮಾಡುವುದಾಗಿ ಅರಣ್ಯಾಧಾರಿಕಾರಿ ಶಿವಕುಮಾರ ರಾಠೊಡ ಮಾಹಿತಿ ನೀಡಿದ್ದಾರೆ.

RELATED ARTICLES

Related Articles

TRENDING ARTICLES