Wednesday, January 22, 2025

ನಾಳೆ ಜೈಲರ್​ ಸಿನಿಮಾ ಬಿಡುಗಡೆ: ಉದ್ಯೋಗಿಗಳಿಗೆ ರಜೆ ಜೊತೆಗೆ ಫ್ರೀ ಟಿಕೆಟ್​ ನೀಡಿದ ಕಂಪೆನಿ!

ಚನ್ನೈ : ಸೂಪರ್​ಸ್ಟಾರ್​ ರಜನಿಕಾಂತ್​ ಬಹುನಿರೀಕ್ಷಿತ “ಜೈಲರ್”​ ಸಿನಿಮಾ ನಾಳೆ ಬಿಡುಗಡೆಯಾಗುತ್ತಿದ್ದು ತಮಿಳುನಾಡು ಮತ್ತು ಬೆಂಗಳೂರಿನ ಹಲವು ಕಂಪೆನಿಗಳು ತಮ್ಮ ಉದ್ಯೋಗಿಗಳಿಗೆ ರಜೆ ನಡಿದ್ದು ಜೈಲರ್​ ಸಿನಿಮಾ ನೋಡಲು ಅವಕಾಶ ಮಾಡಿಕೊಟ್ಟಿದೆ.

2 ವರ್ಷಗಳ ಸುಧೀರ್ಘ ಗ್ಯಾಪ್​ ನಂತರ ದಕ್ಷಿಣ ಭಾರತದ ಸೂಪರ್​ ಸ್ಟಾರ್​ ನಟ ರಜನಿಕಾಂತ್​ ರ ಬಹುನಿರೀಕ್ಷಿತ ಸಿನಿಮಾ (ಆಗಸ್ಟ್​ 10)ರಂದು ನಾಳೆ ದೇಶಾದ್ಯಂತ ಬಿಡುಗಡೆಗೆ ಸಜ್ಜಾಗಿದೆ, ಈ ಹಿನ್ನೆಲೆಯಲ್ಲಿ ಚನ್ನೈ ನಲ್ಲಿರುವ ಕೆಲವು ಖಾಸಗಿ ಕಂಪೆನಿಗಳು ಮತ್ತು ಬೆಂಗಳೂರಿನಲ್ಲಿರುವ ಕೆಲ ಖಾಸಗಿ ಕಂಪೆನಿಗಳು ತಮ್ಮ ಉದ್ಯೋಗಿಗಳಿಗೆ ಸಿನಿಮಾ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟಿದೆ.

ಸಿನಿಮಾದ ಪೈರಸಿ ತಡೆಗಟ್ಟುವ ನಿಟ್ಟಿನಲ್ಲಿ ಕಂಪೆನಿಗಳ ಉದ್ಯೋಗಿಗಳಿಗೆ ಉಚಿತವಾಗಿ ಸಿನಿಮಾ ಟಿಕೆಟ್​ಗಳನ್ನು ನೀಡಲು ಸಿದ್ದತೆ ಮಾಡಿಕೊಂಡಿರುವ ಬಗ್ಗೆ ಖಾಸಗಿ ಕಂಪೆನಿಯೊಂದು ತಮ್ಮ ಟ್ವಿಟರ್​ ಖಾತೆಯಲ್ಲಿ ಬರೆದುಕೊಂಡಿದೆ.

RELATED ARTICLES

Related Articles

TRENDING ARTICLES