Wednesday, January 22, 2025

ವೃದ್ಧೆ ಮೇಲೆ ಗೂಳಿ ದಾಳಿ; ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಮೈಸೂರು : ವೃದ್ಧೆಯ ಮೇಲೆ ಗೂಳಿಯೊಂದು ದಾಳಿ ಮಾಡಿರುವ ಘಟನೆ ಜಿಲ್ಲೆಯ ಸರಸ್ವತಿಪುರಂನ ಪಾರ್ಕ ಬಳಿ ನಡೆದಿದೆ. ಗೂಳಿ ದಾಳಿ ನಡೆಸಿರುವ ದೃಶ್ಯ ಪಾರ್ಕ್​ ಮುಂಭಾಗದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಮಂಜುಳಾ (64) ಗಾಯಗೊಂಡ ವೃದ್ಧೆ, ಎಂಬುವವರು ರಸ್ತೆಯಲ್ಲಿ ನಡೆದುಕೊಂಡು ಹೋಗುವ ವೇಳೆ ಗೂಳಿಯೊಂದು ಏಕಾಏಕಿಯಾಗಿ ಬಂದು ದಾಳಿ ನಡೆಸಿದೆ. ಗೂಳಿ ಗುದ್ದಿದ್ದ ರಭಸಕ್ಕೆ ವೃದ್ಧೆ ಗಂಭೀರ ಗಾಯಗೊಂಡಿದ್ದಾರೆ. ಸದ್ಯ ಗಾಯಾಳು ಮಂಜುಳಾ ವೃದ್ಧೆಯನ್ನು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕೆತ್ಸೆ ಕೊಡಿಸಲಾಗಿದೆ.

ಇದನ್ನು ಓದಿ : WI vs IND : ಟೀಂ ಇಂಡಿಯಾಗೆ ಭರ್ಜರಿ ಗೆಲುವು

ಮೈಸೂರು ನಗರದಲ್ಲಿ ಬೀದಿ ನಾಯಿಗಳ ಕಾಟ ಒಂದು ಕಡೆಯಾದರೆ, ಬೀದಿ ದನಗಳ ಕಾಟವು ಹೆಚ್ಚಾಗಿದೆ. ರಸ್ತೆಗಳಲ್ಲಿ ನಾಯಿ ಮತ್ತು ದನಗಳು ಅಡ್ಡಾದಿಡ್ಡಿ ಓಡಾಡುವುದು ಮತ್ತು ರಸ್ತೆ ಮಧ್ಯದಲ್ಲಿ ಮಲಗುವುದು ಸಾಮಾನ್ಯವಾಗಿದೆ. ಇದರಿಂದ ವಾಹನಗಳ ಓಡಾಟ ಕಷ್ಟಕರವಾಗಿದೆ.

ಈ ಸಂಬಂಧ ಬೀದಿ ನಾಯಿಗಳು ಮತ್ತು ಬೀದಿ ದನಗಳ ಹಾವಳಿಯನ್ನು ತಪ್ಪಿಸಬೇಕೆಂದು ನಗರ ಪಾಲಿಕೆ ಅಧಿಕಾರಿಗಳಿಗೆ ಒತ್ತಾಯಿಸಿದ ಸಾರ್ವಜನಿಕರು.

RELATED ARTICLES

Related Articles

TRENDING ARTICLES