Monday, December 23, 2024

ಎಣ್ಣೆ ಏಟಲ್ಲಿ ಸ್ನೇಹಿತನನ್ನೇ ಕೊಂದ ಪಾಪಿ : ನಿದ್ದೆಯಿಂದ ಎದ್ದು ಪೊಲೀಸರಿಗೆ ಶರಣು

ಬೆಂಗಳೂರು : ಕುಡಿದ ಮತ್ತಿನಲ್ಲಿ ಗೆಳೆಯನ ಜೊತೆ ಕಿರಿಕ್ ಮಾಡಿಕೊಂಡಿದ್ದ ಸ್ನೇಹಿತನೊಬ್ಬ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಬೆಂಗಳೂರಿನ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಭೀಕರ ಹತ್ಯೆ ನಡೆದಿದೆ. ಚೇತನ್(21) ಕೊಲೆಯಾದ ಸ್ನೇಹಿತ. ಅಮಾನುಲ್ಲಾ ಕೊಲೆ ಮಾಡಿರುವ ಆರೋಪಿ.

ಸಣ್ಣ ಪುಟ್ಟ ಕೆಲಸ ಮಾಡ್ಕೊಂಡಿದ್ದ  ಆರೋಪಿ ಅಮಾನುಲ್ಲಾಗೆ 21 ವರ್ಷದ ಚೇತನ್ ಬಹು ದಿನದ ಗೆಳೆಯನಾಗಿದ್ದ. ಇಬ್ಬರ ಮಧ್ಯೆ ಆಗಾಗ ಸಣ್ಣಪುಟ್ಟ ಜಗಳ ನಡೀತಾನೆ ಇತ್ತು. ಇಬ್ಬರೂ ಜೊತೆಗೆ ಕುಡೀತಿದ್ರು. ಅದೇ ರೀತಿ ನಿನ್ನೆ ಕೊಮ್ಮಘಟ್ಟ ಮೈದಾನದ ಬಳಿ ಇಬ್ಬರೂ ಕುಡಿದುಕೊಂಡು ಹೋಗಿದ್ದಾರೆ. ಕುಡಿದ ಮತ್ತಿನಲ್ಲಿ ಇಬ್ಬರ ಮಧ್ಯೆ ಜಗಳ ನಡೆದಿದೆ. ಈ ವೇಳೆ ಅಲ್ಲೇ ಇದ್ದ ಕಲ್ಲು ಕೈಗೆತ್ತುಕೊಂಡಿದ್ದ ಆರೋಪಿ, ಚೇತನ್ ತಲೆ ಮೇಲೆ ಹಾಕಿ ಕೊಲೆ ಮಾಡಿದ್ದಾನೆ.

ಪೊಲೀಸರಿಗೆ ಶರಣಾದ ಆರೋಪಿ

ಮೊದಲೇ ನಶೆಯಲ್ಲಿದ್ದ ಆರೋಪಿ ಸೀದಾ ಮನೆಗೆ ಹೋಗಿ ಮಲಗಿದ್ದಾನೆ. ಬೆಳಗ್ಗೆ ಎದ್ದು ನೀಟಾಗಿ ಸ್ನಾನ ಮಾಡಿ ಮನೆಯಲ್ಲಿ ಕುಳಿತಿದ್ದವನಿಗೆ ರಾತ್ರಿ ಏನೋ ನಡೆದಿದೆ ಅಂತ ಗೊತ್ತಾಗಿದೆ. ನೆನಪು ಮಾಡಿಕೊಂಡಾಗ ತನ್ನ ಗೆಳೆಯನನ್ನೇ ಕೊಲೆ ಮಾಡಿರೋದು ಗೊತ್ತಾಗಿದೆ. ಕೂಡಲೇ ಕೆಂಗೇರಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.

ಕೊಲೆ ಬಗ್ಗೆ ಬಾಯ್ಬಿಡ್ತಿದ್ದಂತೆ ಆರೋಪಿ ಅಮಾನುಲ್ಲಾನನ್ನು ಬಂಧಿಸಿರುವ ಪೊಲೀಸರು, ಹೆಚ್ಚಿನ ವಿಚಾರಣೆ ನಡೆಸ್ತಿದ್ದಾರೆ. ತನಿಖೆ ನಂತರವಷ್ಟೇ ಕೊಲೆಯ ಅಸಲಿ ಕಾರಣ ತಿಳಿಯಲಿದೆ.

RELATED ARTICLES

Related Articles

TRENDING ARTICLES