Monday, December 23, 2024

ಜಮೀನು ವಿಚಾರಕ್ಕೆ ಗಲಾಟೆ ; ಅವಮಾನ ಸಹಿಸದೇ ಆತ್ಮಹತ್ಯೆ ಮಾಡಿಕೊಂಡ ರೈತ

ಮೈಸೂರು : ಜಮೀನು ವಿಚಾರಕ್ಕೆ ಉಂಟಾದ ಗಲಾಟೆಯಿಂದ ತನಾಗದ ಅವಮಾನವನ್ನು ತಾಳಲಾರದೆ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಣುಸೂರು ತಾಲೂಕು ಕುಡಿ ಮುದ್ದನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದಲ್ಲಿ ಗುರುರಾವ್ (60) 2 ಎಕರೆ 5 ಗುಂಟೆ ಜಮೀನು ಹೊಂದಿದ್ದರು. ಪಕ್ಕದ ಜಮೀನಿನವರಾದ ಮಹೇಶ್ ಎಂಬುವವರು 16 ಗುಂಟೆ ಜಮೀನಿನ ವಿಚಾರವಾಗಿ ಸದಾ ಕಿರಿಕ್ ಮಾಡುತ್ತಿದ್ದರು. ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಆದರೂ ಸಹ ಈ ಸಂಬಂಧ ಆಗಾಗ ಬಂದು ಗಲಾಟೆ ಮಾಡುತ್ತಿದ್ದ ಮಹೇಶ್ ಕುಟುಂಬಸ್ಥರು.

ಇದನ್ನು ಓದಿ : ಬೆಂಗಳೂರಿನಲ್ಲಿ ಹಿಟ್​ & ರನ್​ ಕೇಸ್​: ಅಪ್ಪ-ಮಗ ಸಾವು!

ಬಳಿಕ ಗಲಾಟೆ ವಿಕೋಪಕ್ಕೆ ಹೋಗಿದ್ದು, ಈ ವೇಳೆ ಗುರುರಾವ್ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿರುವ ಮಹೇಶ್. ಅದರಿಂದ ಮನನೊಂದ ರೈತ ಅವಮಾನವನ್ನು ಸಹಿಸಲಾರದೆ ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾನೆ.

ಕುಟುಂಬಸ್ಥರ ಆರೋಪದ ಹಿನ್ನೆಲೆ ಹುಣುಸೂರು ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES