ಬೆಂಗಳೂರು : ‘ಮೋದಿ’ ಉಪನಾಮ ಟೀಕೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ರಾಹುಲ್ ಗಾಂಧಿ ಅವರ ಅಪರಾಧಿಗೆ ತಡೆ ನೀಡಿದ ನಂತರ ಲೋಕಸಭೆಯ ಸೆಕ್ರೆಟರಿಯೇಟ್ ಸದಸ್ಯತ್ವವನ್ನು ಮರುಸ್ಥಾಪಿಸಲಾಗಿದೆ.
ಕಳೆದ ಆರು ತಿಂಗಳಿನಿಂದ ಸಂಸತ್ನಲ್ಲಿ ಭಾಗಿಯಾಗದೇ ದೂರ ಉಳಿದಿದ್ದ ರಾಹುಲ್ ಗಾಂಧಿ ಇಂದು ಮತ್ತೆ ಲೋಕಸಭೆ ಪ್ರವೇಶ ಮಾಡಿದ್ದಾರೆ. ಈ ಕುರಿತು ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿದ್ದು, ಬಿಜೆಪಿ ವಿರುದ್ಧ ಕಿಡಿಕಾರಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಸಂವಿಧಾನದ ನೆರಳಲ್ಲಿ ಭಾರತ ಇರುವಾಗ ಸತ್ಯವನ್ನು ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ. ರಾಹುಲ್ ಗಾಂಧಿ ಸಂಸತ್ತಿಗೆ ಮತ್ತೊಮ್ಮೆ ಕಾಲಿಡುತ್ತಿದ್ದಾರೆ. ಇನ್ನಷ್ಟು ಪ್ರಶ್ನೆಗಳೊಂದಿಗೆ, ಇನ್ನಷ್ಟು ಆತ್ಮವಿಶ್ವಾಸದೊಂದಿಗೆ ಹಾಗೂ ಇನ್ನಷ್ಟು ದೃಢತೆಯೊಂದಿಗೆ. ಆದರೆ, ‘ಐಷಾರಾಮಿ ಪಕೀರ’ ಸಂಸತ್ತಿನ ಕಡೆ ತಲೆ ಹಾಕಿಲ್ಲ! ಎಂದು ವಾಗ್ದಾಳಿ ನಡೆಸಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಸಂವಿಧಾನದ ನೆರಳಲ್ಲಿ ಭಾರತ ಇರುವಾಗ ಸತ್ಯವನ್ನು ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ.
ಸಂಸತ್ತಿಗೆ ಮತ್ತೊಮ್ಮೆ ಕಾಲಿಡುತ್ತಿದ್ದಾರೆ @RahulGandhi,
ಇನ್ನಷ್ಟು ಪ್ರಶ್ನೆಗಳೊಂದಿಗೆ..
ಇನ್ನಷ್ಟು ಆತ್ಮವಿಶ್ವಾಸದೊಂದಿಗೆ..
ಇನ್ನಷ್ಟು ದೃಢತೆಯೊಂದಿಗೆ..ಆದರೆ
"ಐಷಾರಾಮಿ ಪಕೀರ" ಸಂಸತ್ತಿನ ಕಡೆ ತಲೆ ಹಾಕಿಲ್ಲ! pic.twitter.com/G5MgVRs2PY— Karnataka Congress (@INCKarnataka) August 7, 2023