Monday, December 23, 2024

ವಿಜಯ್​ ರಾಘವೇಂದ್ರ ಪತ್ನಿ ಸ್ಪಂದನಾ ಸಾವಿಗೆ ಡಿಸಿಎಂ ಡಿಕೆಶಿ ಸಂತಾಪ!​

ಬೆಂಗಳೂರು: ಸ್ಯಾಂಡಲ್​ವುಡ್​ ನಟ ವಿಜಯ್​ ರಾಘವೇಂದ್ರ ಪತ್ನಿ ಸ್ಪಂದನಾ ನಿಧನಕ್ಕೆ ಚಿತ್ರರಂಗ ಅಷ್ಟೆ ಅಲ್ಲದೇ ರಾಜಕಾರಣಿಗಳು ಕಂಬನಿ ಮಿಡಿದಿದ್ದಾರೆ.

ಇದನ್ನು ಓದಿ: ತಮ್ಮ ಅತ್ತಿಗೆ ನಿಧನಕ್ಕೆ ಕಂಬನಿ ಮಿಡಿದ ನಟ ಶ್ರೀಮುರಳಿ ಹೇಳಿದ್ದೇನು?

ನಟ ವಿಜಯ್​ ರಾಘವೇಂದ್ರ ಪತ್ನಿ ಸ್ಪಂದನಾ ಇತ್ತೀಚೆಗೆ ಯೂರೋಪ್​ ಪ್ರವಾಸಕ್ಕೆ ತೆರಳಿದ್ದರು, ಬ್ಯಾಂಕಾಕ್​ ನಲ್ಲಿ ನೆನ್ನೆ ಲೋ-ಬಿಪಿಯಿಂದಾಗಿ ಹೃದಯಾಘಾತ ಸಂಭವಿಸಿದ್ದು ಸಂಜೆ ಮಲಗಿದವರು ಕೊನೆಯುಸಿರೆಳೆದಿದ್ದಾರೆ.

ಸಾವಿನ ವಿಚಾರ ತಿಳಿಯುತ್ತಿದ್ದಂತೆ ಸಿನಿಮಾರಂಗದ ಗಣ್ಯರು ಹಾಗೂ ರಾಜಕಾರಣಿಗಳು ಸಂತಾಪ ಸೂಚಿಸುತ್ತಿದ್ದಾರೆ.

ಸ್ಪಂದನಾ ಸಾವಿನ ಕುರಿತು ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಮಾದ್ಯಮ ಪ್ರತಿಕ್ರಿಯೆ ನೀಡಿದ್ದು, ಸ್ಪಂದನಾ ಸಾವಿನ ವಿಚಾರವನ್ನು ನನ್ನ ಮನೆಯವರು ತಿಳಿಸಿದ ಮೇಲೆ ಗೊತ್ತಾಯಿತು, ಇಷ್ಟು ಚಿಕ್ಕ ವಯಸ್ಸಿಗೆ ಈ ರೀತಿ ಆಗಬಾರದಿತ್ತು, ಭಗವಂತ ಯಾಕೀರೀತಿ ಮಾಡಿದನೋ ಅರ್ಥವಾಗುತ್ತಿಲ್ಲ, ಭಗವಂತ ಅವರ ಕುಟುಂಬಕ್ಕೆ ಮತ್ತು ಅವರ ಇಡೀ ಸಮುದಾಯಕ್ಕೆ ಈ ದುಃಖವನ್ನು ಭರಿಸುವಂತ ಶಕ್ತಿ ಆ ಭಗವಂತ ಕೊಡಲಿ ಎಂದು ಕೇಳಿಕೊಳ್ಳತ್ತೇನೆ ಎಂದರು.

RELATED ARTICLES

Related Articles

TRENDING ARTICLES