Wednesday, January 22, 2025

ಡಯಟ್​​ ಮೊರೆ ಹೋಗಿದ್ದೆ ಸ್ಪಂದನಾ ಹೃದಯಾಘಾತಕ್ಕೆ ಕಾರಣವಾಯ್ತಾ!?

ಬೆಂಗಳೂರು: ಸ್ಯಾಂಡಲ್​ವುಡ್​ ನಟ ಚಿನ್ನಾರಿ ಮುತ್ತ ಖ್ಯಾತಿಯ ವಿಜಯ್​ ರಾಘವೇಂದ್ರ ಅವರ ಪತ್ನಿ ಇಂದು ಹೃದಯಾಘಾತದಿಂದ ಬ್ಯಾಂಕಾಕ್​ನಲ್ಲಿ ಕೊನೆಯುಸಿರೆಳಿದ್ದಾರೆ.

ಇದನ್ನು ಓದಿ: ನಟ ವಿಜಯ್​ ರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನ!

ಇತ್ತೀಚೆಗೆ ತಮ್ಮ ಸಂಬಂಧಿಕರೊಂದಿಗೆ ಯೂರೋಪ್​ ಪ್ರವಾಸ ಕೈಗೊಂಡಿದ್ದ ವಿಜಯ್​ ಪತ್ನಿ ಸ್ಪಂದನಾ ಲೋ ಬಿಪಿ ಯಿಂದಾಗಿ ತೀವ್ರ ಹೃದಯಾಘಾತದಿಂದ ಬ್ಯಾಂಕಾಕ್​ನಲ್ಲಿ ನಿಧರಾಗಿದ್ದಾರೆ.

2007ರ ಆಗಸ್ಟ್​ 26 ರಂದು ಸ್ಪಂದನಾ ರನ್ನು ವಿಜಯ್​ ರಾಘವೇಂದ್ರ ಮದುವೆಯಾಗಿದ್ದರು, ವಿಜಯ ರಾಘವೇಂದ್ರ ಹಾಗೂ ಸ್ಪಂದನಾರದ್ದು ಪ್ರೇಮವಿವಾಹವಾಗಿತ್ತು. ಇವರ ದಾಂಪತ್ಯಕ್ಕೆ ಶೌರ್ಯ ಎಂಬ ಮಗನಿದ್ದಾನೆ.

ಇತ್ತೀಚೆಗೆ ತಮ್ಮ ದೇಹದ ತೂಕ ಇಳಿಸಿಕೊಳ್ಳುವ ಸಲುವಾಗಿ ಡಯಟ್​ ಮತ್ತು ಜಿಮ್​ ಮೊರೆ ಹೋಗಿದ್ದರು, ನಿತ್ಯ ಡಯೆಟ್​ ತಪ್ಪದೇ ಪಾಲಿಸುತ್ತಿದ್ದರು, ದೇಹದಂಡನೆಗೆ ಇಳಿದದ್ದೇ ಈ ಆಘಾತಕ್ಕೆ ಕಾರಣವಾಯಿತೆ ಎನ್ನುವ ಪ್ರಶ್ನೆ ಈಗ ಕಾಡಿದೆ.

16ನೇ ವಿವಾಹ ವಾರ್ಷಿಕೋತ್ಸವಕ್ಕೆ ಇನ್ನು ಕೇವಲ 19 ದಿನಗಳಷ್ಟೆ ಬಾಕಿ ಇದ್ದ ಸಂದರ್ಭದಲ್ಲಿ ಸ್ಪಂದನಾ ಸಾವು ವಿಜಯ್​ ರಾಘವೇಂದ್ರ ಬದುಕಿನಲ್ಲಿ ತುಂಬಲಾಗದ ನಷ್ಟವನ್ನುಂಟು ಮಾಡಿದೆ.

RELATED ARTICLES

Related Articles

TRENDING ARTICLES