Sunday, December 22, 2024

ವಿದ್ಯಾರ್ಥಿಯ ಜೀವ ತೆಗೆದ PUBG ಗೇಮ್!

ಕಲಬುರಗಿ : ಪಬ್​ಜಿ ಗೇಮ್​ನ ಗೀಳಿಗೆ ಬಿದ್ದು ಎಂಜಿನಿಯರಿಂಗ್(BE) ವಿದ್ಯಾರ್ಥಿಯೊಬ್ಬ ಪ್ರಾಣ ಕಳೆದುಕೊಂಡಿರುವ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸುಲಹಳ್ಳಿ ಗ್ರಾಮದಲ್ಲಿ ನಡೆದಿದೆ.

ಸುಲಹಳ್ಳಿ ಗ್ರಾಮದ ನಿವಾಸಿ ಪ್ರವೀಣ್ ಮೃತಪಟ್ಟಿರುವ ಯುವಕ. ಈತ ಖಾಸಗಿ ಕಾಲೇಜ್​ನಲ್ಲಿ ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿಕೊಂಡಿದ್ದ. ಪೋಷಕರೊಂದಿಗೆ ನಗರದ ದೇವಿ ನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸ ಮಾಡ್ತಿದ್ದ. ಪಬ್​ಜಿ ಗೇಮ್​ನ ಗೀಳಿಗೆ ಬಿದ್ದು ಇದೀಗ ಪ್ರಾಣ ಕಳೆದುಕೊಂಡಿದ್ದಾನೆ.

ಭಾನುವಾರ ಕಾಲೇಜಿಗೆ ರಜೆ ಇದ್ದ ಹಿನ್ನೆಲೆಯಲ್ಲಿ ಪ್ರವೀಣ್ ಮನೆಯಲ್ಲೇ ಇದ್ದ. ತಾಯಿ, ಸಂಬಂಧಿಕರ ಮನೆಯಲ್ಲಿ ಕಾರ್ಯಕ್ರಮ ಇದ್ದ ಹಿನ್ನೆಲೆಯಲ್ಲಿ ಹೈದ್ರಾಬಾದ್​​ಗೆ ತೆರಳಿದ್ದರು. ತಂದೆ ಜಮೀನಿನಲ್ಲಿ ಬಿತ್ತನೆ ಕೆಲಸ, ಕಾರ್ಯಗಳನ್ನ ನೋಡೊದಕ್ಕೆ ಹೋಗಿದ್ದರು. ತಡರಾತ್ರಿ ಹೈದ್ರಾಬಾದ್​​ನಿಂದ ತಾಯಿ ಮನೆಗೆ ಬಂದು ಬಾಗಿಲು ತಟ್ಟಿದ್ದಾಗ ಪ್ರವೀಣ್ ಬಾಗಿಲು ತೆಗೆದಿರಲಿಲ್ಲ. ಬಳಿಕ ಅನುಮಾನ ಬಂದು ಬಾಗಿಲು ಒಡೆದು ನೋಡಿದಾಗ ಪ್ರವೀಣ್​​ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರೋದು ಬೆಳಕಿಗೆ ಬಂದಿದೆ.

80 ಸಾವಿರ ರೂ. ಕಳೆದುಕೊಂಡಿದ್ದ

ಪ್ರವೀಣ್ ಓದುತ್ತಿದ್ದ ಕಾಲೇಜಿನಲ್ಲೇ ತಾಯಿ ಅಟೆಂಡರ್ ಆಗಿ ಕೆಲಸ ಮಾಡ್ತಿದ್ದರು. ಆದ್ರೆ, ಪ್ರವೀಣ್ ಕೆಲ ದಿನಗಳಿಂದ ಮೊಬೈಲ್​ನಲ್ಲೇ ಹೆಚ್ಚು ಕಾಲ ಕಳೆಯುತ್ತಿದ್ದ ಎನ್ನಲಾಗಿದೆ. ಪಬ್ ಜಿ ಗೇಮ್ ಆಡುತ್ತಿದ್ದ ಪ್ರವೀಣ್, ಸುಮಾರು 80 ಸಾವಿರ ರೂಪಾಯಿ ಕಳೆದುಕೊಂಡಿದ್ದಾನೆ. ಇದರಿಂದ ಬೇಸತ್ತಿದ್ದ ಪ್ರವೀಣ್ ಜೀವನದಲ್ಲಿ ಜಿಗುಪ್ಸೆ ಹೊಂದಿದ್ದು, ಆತ್ಮಹತ್ಯೆಯ ದಾರಿ ಹಿಡಿದಿದ್ದಾನೆ. ಈ ಸಂಬಂಧ ಆರ್.ಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES