Monday, December 23, 2024

ಇನ್ನೆರಡು ದಿನಗಳಲ್ಲಿ 21 ಇನ್ಸ್​ಪೆಕ್ಟರ್​ಗಳ ವರ್ಗಾವಣೆಗೆ ಆದೇಶ: ಗೃಹಸಚಿವ

ಬೆಂಗಳೂರು: ಕಾರಣಾಂತರಗಳಿಂದ ತಡೆಹಿಡಿಯಲಾಗಿದ್ದ 21 ಪೊಲೀಸ್‌ ಇನ್‌ಸ್ಪೆಕ್ಟರ್‌ಗಳ ವರ್ಗಾವಣೆಗೆ ಸೋಮವಾರ ಅಥವಾ ಮಂಗಳವಾರ ಹೊಸ ಆದೇಶ ನೀಡಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.

ಇದನ್ನು ಓದಿ: ಪಿಒಪಿ ಗಣೇಶ ತಯಾರಿಸಿದರೆ ಕ್ರಮಕ್ಕೆ ಸೂಚನೆ: ಸಚಿವ ಈಶ್ವರ ಖಂಡ್ರೆ 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ರಾಜ್ಯಾಂತರ ಒಟ್ಟು 211 ಇನ್ಸ್​ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿ ಆದೇಶಿಸಕಾಗಿತ್ತು. ಈ ಪೈಕಿ ಶೇ.90 ಅಧಿಕಾರಿಗಳು ನಿಯೋಜಿತ ಸ್ಥಳಕ್ಕೆ ಹೋಗಿ ವರದಿ ಮಾಡಿಕೊಂಡಿದ್ದು, ಶೇ.10 ವರ್ಗಾವಣೆಯಲ್ಲಿ ತಾಂತ್ರಿಕ ಸಮಸ್ಯೆಗಳಿದ್ದ ಕಾರಣ 21 ಇನ್ ವರ್ಗಾವಣೆ ಮಾತ್ರ ತಡೆ ಹಿಡಿಯಲಾಗಿದೆ ಎಂದು ಸ್ಪಷ್ಟಪಡಿಸಿದರು.

ವರ್ಗಾವಣೆಯಲ್ಲಿ ಎಲ್ಲವನ್ನೂ ಕರಾರುವಕ್ಕಾಗಿ ಮಾಡಲು ಆರೋಪ ಮಾಡುತ್ತಿರುವವರ ಕಾಲದಲ್ಲೂ ಸಮರ್ಪಕವಾಗಿ ಸಾಧ್ಯವಾಗಿಲ್ಲ. ಈಗ ಸಣ್ಣಪುಟ್ಟ ಸಮಸ್ಯೆಗಳನ್ನೇ ದೊಡ್ಡದು ಮಾಡಿ ಟೀಕೆ ಮಾಡುವುದು ಸರಿಯಲ್ಲ ಎಂದರು.

ಪರಿಶಿಷ್ಟ ಸಮುದಾಯದ ಅನುದಾನ ಬಳಕೆ ಆರೋಪದಲ್ಲಿ ಯಾವುದೇ ಹುರುಳಿಲ್ಲ: ಪರಿಶಿಷ್ಟ ಸಮುದಾಯಕ್ಕೆ ಮೀಸಲಾಗಿರುವ ಎಸ್‌ಸಿಎಸ್‌ ಮತ್ತು ಟಿಎಸ್‌ಪಿ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ಬಿಜೆಪಿ ಟೀಕೆಯಲ್ಲಿ ಹುರುಳಿಲ್ಲ. ಈ ಹಿಂದೆ ಎಸ್‌ಸಿ-ಎಸ್‌ಟಿ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಖರ್ಚು ಮಾಡಬೇಕೆಂದು ಕಾನೂನು ರೂಪಿಸಿದ್ದೇ ಕಾಂಗ್ರೆಸ್‌ ಸರ್ಕಾರ. ಬಿಜೆಪಿಯವರು ಆಡಳಿತದಲ್ಲಿದ್ದಾಗ ಅದನ್ನು ಉಲ್ಲಂಘಿಸಿದ್ದರು. ಎಸ್‌ಸಿಎಸ್‌ಪಿಗೆ 30 ಸಾವಿರ ಕೋಟಿ ರೂ.ಗೆ ಬದಲಾಗಿ 25 ಸಾವಿರ ಕೋಟಿ ರೂ. ನೀಡಿದ್ದರು. ಬಳಿಕ 7ಡಿ ಬಳಕೆ ಮಾಡಿ ಹಿಂಬಾಗಿಲಿನಿಂದ ಅನುದಾನ ಬೇರೆ ಉದ್ದೇಶಕ್ಕೆ ವರ್ಗಾವಣೆ ಮಾಡಿದ್ದು ಬಿಜೆಪಿಯವರು, ಈಗ ನಮ್ಮ ಬಗ್ಗೆ ಟೀಕೆ ಮಾಡುತ್ತಿದ್ದಾರೆ ಎಂದು ಸಚಿವ ಡಾ.ಜಿ.ಪರಮೇಶ್ವರ ತಿರುಗೇಟು ನೀಡಿದರು.

RELATED ARTICLES

Related Articles

TRENDING ARTICLES