Sunday, December 22, 2024

ಕಾಂಗ್ರೆಸ್ ಸರ್ಕಾರದಲ್ಲಿ ಸ್ವಚ್ಛ ಆಡಳಿತ ಇದೆ : ರಾಮಲಿಂಗರೆಡ್ಡಿ

ರಾಮನಗರ : ಕಾಂಗ್ರೆಸ್ ಸರ್ಕಾರದಲ್ಲಿ ವೈಎಸ್​ಟಿ ಟ್ಯಾಕ್ಸ್ ಕುರಿತ ಮಾಜಿ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ಆರೋಪಕ್ಕೆ ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗರೆಡ್ಡಿ ತಿರುಗೇಟು ಕೊಟ್ಟಿದ್ದಾರೆ.

ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ವಿರೋಧ ಪಕ್ಷದಲ್ಲಿದ್ದಾರೆ. ಅದಕ್ಕಾಗಿ ಈ ರೀತಿಯ ಹೇಳಿಕೆ ನೀಡ್ತಿದ್ದಾರೆ. ನಮ್ಮಲ್ಲಿ ಯಾವ ದಂಧೆಯೂ ಇಲ್ಲ, ಯಾವ ಭ್ರಷ್ಟಾಚಾರವೂ ಇಲ್ಲ. ನಮ್ಮಲ್ಲಿ ಸ್ವಚ್ಛ ಆಡಳಿತ ಇದೆ ಎಂದು ಟಾಂಗ್ ಕೊಟ್ಟಿದ್ದಾರೆ.

1ನೇ ತಾರೀಖು ಸಂಬಳ ಕೊಡ್ತೀವಿ

ಇನ್ನು ಪೊಲೀಸ್ ಹಾಗೂ ಸಾರಿಗೆ ಇಲಾಖೆಯಲ್ಲಿ ಸಂಬಳ ವಿಳಂಬ ವಿಚಾರದ ಬಗ್ಗೆ ಮಾತನಾಡಿ, ಒಂದೊಂದು ಇಲಾಖೆಯಲ್ಲಿ ಒಂದೊಂದು ರೀತಿಯ ಕಾರ್ಯವೈಖರಿ ಇದೆ. ನಮ್ಮ ಕೆಎಸ್ಆರ್ಟಿಸಿಯಲ್ಲಿ 1ನೇ ತಾರೀಖು ಸಂಬಳ ನೀಡಲಾಗುತ್ತೆ. ಬಿಎಂಟಿಸಿಯಲ್ಲಿ 7ನೇ ತಾರೀಖು, ಕಲ್ಯಾಣ ಕರ್ನಾಟಕ ಸಾರಿಗೆಗೆ ಒಂದು ದಿನ ನಿಗಧಿ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಅರ್ಧ ಸಂಬಳ ಅಂತ ಆರೋಪ

ಎಲ್ಲಾ ಇಲಾಖೆಗಳಲ್ಲೂ ಈ ರೀತಿಯ ಸಂಬಳ ನೀಡ್ತಾರೆ. ಆದರೆ, ಇದರಲ್ಲಿ ರಾಜಕೀಯ ಮಾಡ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಮ್ಮ ಸಾರಿಗೆ ಇಲಾಖೆ ಸಂಬಳ ಕುರಿತು ಟ್ವೀಟ್ ಮಾಡಿದ್ರು. ಅರ್ಧ ಸಂಬಳ ಅಂತ ಆರೋಪ ಮಾಡಿದ್ರು. ಆದರೆ, ಪೂರ್ಣ ಮಾಹಿತಿ ಇಲ್ಲದೇ ಈ ರೀತಿಯ ಹೇಳಿಕೆ ನೀಡಬಾರದು ಎಂದು ಚಾಟಿ ಬೀಸಿದ್ದಾರೆ.

RELATED ARTICLES

Related Articles

TRENDING ARTICLES