Monday, December 23, 2024

ಗ್ಯಾರಂಟಿಗಳ ಹೆಸರಲ್ಲಿ ಹೂ ಕುಂಡವನ್ನೇ ಇಟ್ಟಿದ್ದೀರಿ : ಕುಮಾರಸ್ವಾಮಿ

ಬೆಂಗಳೂರು : ಕಾಂಗ್ರೆಸ್ ಸರ್ಕಾರ​​​ ನೀಡಿರುವ ಗ್ಯಾರಂಟಿ ವಿಚಾರದಲ್ಲಿ ನುಡಿದಂತೆ ನಡೆದಿದ್ದೇವೆ ಅಂತ ಕಾಂಗ್ರೆಸ್‌ ಹೇಳಿದೆ. ಇಲ್ಲಿ ಯಾವ ರೀತಿ ನುಡಿದಂತೆ ನೀವು ನಡೆದಿದ್ದೀರಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 200 ಯೂನಿಟ್‌ ಉಚಿತ ಅಂತ ಹೇಳಿ ಮೋಸ ಮಾಡಿದ್ರಿ. ಗ್ಯಾರಂಟಿಗಳ ಹೆಸರಲ್ಲಿ ಜನರ ತಲೆ ಮೇಲೆ ಹೂ ಕುಂಡವನ್ನೇ ಇಟ್ಟಿದ್ದೀರಿ. ಅಭಿವೃದ್ಧಿಗೆ ಅನುದಾನ ಕೊಡಲು ಯಾಕೆ ಆಗಲ್ಲ. ನಿಮ್ಮ ಪಕ್ಷದ 30ಕ್ಕೂ ಹೆಚ್ಚು ಶಾಸಕರು ಅನುದಾನ ಕೊಡ್ತಿಲ್ಲ. ಸರ್ಕಾರಕ್ಕೆ ತೆರಿಗೆಯಿಂದ ಹೆಚ್ಚು ಹಣ ಬಂದಿದೆ. ಆದಾಯ ಬಂದಿದ್ರೂ ಅನುದಾನ ಕೊಡ್ತಿಲ್ಲವೇಕೆ? ಎಂದು ಕಿಡಿಕಾರಿದ್ದಾರೆ.

ಹಿಟ್‌ ಆ್ಯಂಡ್ ರನ್ ಕಾಂಗ್ರೆಸ್‌ ಕೆಲಸ

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್​​​ ಆರೋಪಕ್ಕೆ ಮಾಜಿ ಸಿಎಂ ಹೆಚ್​​​.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಹಿಟ್ ಆ್ಯಂಡ್‌ ರನ್ ಜಾಯಮಾನದ ವ್ಯಕ್ತಿ ನಾನಲ್ಲ. ಹಿಟ್‌ ಆ್ಯಂಡ್ ರನ್ ಕೆಲಸ ಮಾಡಿದ್ರೆ, ಅದು ಕಾಂಗ್ರೆಸ್‌ ಎಂದು ವಾಗ್ದಾಳಿ ನಡೆಸಿದ್ದಾರೆ.

2 ವರ್ಷದ ಹಿಂದೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ದೂರು ಕೊಟ್ಟಿದ್ರು. ಪ್ರಧಾನಮಂತ್ರಿ, ವಿಪಕ್ಷಗಳಿಗೆ ದೂರು ಕೊಟ್ಟಿದ್ರು. ಪೇ ಸಿಎಂ ಅಂತೆಲ್ಲಾ ಪೋಸ್ಟರ್‌ಗಳನ್ನ ಅಂಟಿಸಿದ್ರು. ಒಂದು ಪ್ರಕರಣದಲ್ಲಾದರೂ ದಾಖಲೆ ಬಿಡುಗಡೆ ಮಾಡಿದ್ರಾ? ಎಂದು ಕಾಂಗ್ರೆಸ್​​​ ನಾಯಕರ ವಿರುದ್ಧ ಗುಡುಗಿದ್ದಾರೆ.

RELATED ARTICLES

Related Articles

TRENDING ARTICLES