Wednesday, January 22, 2025

ದೇವಿ.. ನಾನು ಸರ್ವಾಂಗ ಸುಂದರನಾಗಬೇಕು : ದೇವರಿಗೆ ವಿಭಿನ್ನ ಪತ್ರ ಬರೆದ ಯುವಕ

ಚಿಕ್ಕಮಗಳೂರು : ಜಿಲ್ಲೆಯ ಕಳಸ ತಾಲೂಕಿನ ಶ್ರೀ ಗಿರಿಜಾ ದೇವಿಗೆ ಭಕ್ತನೊಬ್ಬ ವಿಚಿತ್ರ ಬೇಡಿಕೆ ಇಟ್ಟು ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾನೆ.

ರಕ್ಷಿತ್​​​ ಎಂಬಾತ ಶ್ರೀ ಗಿರಿಜಾ ದೇವಿಗೆ ಪತ್ರ ಬರೆದಿದ್ದಾನೆ. ರಕ್ಷಿತ್ ಕೆ.ಆರ್.ಆದ ನಾನು ನಿಮ್ಮ ಆಶೀರ್ವಾದ ಬಯಸುತ್ತಿದ್ದೇನೆ. ನಾನು ಒಬ್ಬ ಉತ್ತಮ ನಟ, ಫ್ಯಾಷನ್ ಮಾಡೆಲ್ ಆಗಬೇಕೆಂದು ಇಚ್ಚಿಸುತ್ತೇನೆ. ಈ ಕನಸನ್ನು ನನಸು ಮಾಡುವ ಹೊಣೆ ನಿಮ್ಮದು ಎಂದು ಹೇಳಿದ್ದಾನೆ.

ಮುಂದುವರಿದು, ನಿಮ್ಮಂತೆ ನಾನು ಸರ್ವಾಂಗ ಸುಂದರನಾಗಬೇಕು ಎಂದು ಈ ಪತ್ರದ ಮೂಲಕ ನಿಮ್ಮ ಆಶೀರ್ವಾದವನ್ನ ಆಶಿಸುತ್ತಿದ್ದೇನೆ. ನನ್ನ ಸೌಂದರ್ಯದ ಹೊಣೆ ನಿಮ್ಮದು. ಪ್ರಪಂಚದಲ್ಲೇ ನಾನು ಸರ್ವಾಂಗ ಸುಂದರನೆಂದು ಪ್ರಖ್ಯಾತಿಯಾಗಬೇಕು. ಇದು ನಿಮ್ಮ ಭಕ್ತನ ಪ್ರಾರ್ಥನೆ. ನನ್ನ ಜವಾಬ್ದಾರಿ ನಿಮ್ಮದು ಎಂದು ದೇವಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾನೆ.

ಮನೆಯವರನ್ನು ಉಳಿಸಬೇಡ

ಇನ್ನೊಬ್ಬ ಭಕ್ತ, ‘ನನ್ನ ಜೀವನವನ್ನು ನಾಶ ಮಾಡ್ತಿರೋ ನನ್ನ ಮನೆಯವರನ್ನು ಯಾರನ್ನು ಉಳಿಸಬೇಡ’ ಎಂದು ಪತ್ರದಲ್ಲಿ ಬರೆದು ಹುಂಡಿಗೆ ಹಾಕಿದ್ದಾನೆ. ಇತ್ತೀಚೆಗೆ ಕಲಶೇಶ್ವರ ದೇವರು ಹಾಗೂ ಪರಿವಾರ ದೇವರ ಕಾಣಿಕೆ ಹುಂಡಿ ಹಣ ಎಣಿಕೆ ನಡೆಯುವಾಗ ಪತ್ರ ಸಿಕ್ಕಿದೆ.

RELATED ARTICLES

Related Articles

TRENDING ARTICLES