Thursday, January 23, 2025

ಅಪಘಾತ ತಪ್ಪಿಸಲು ಹೋಗಿ ರಸ್ತೆ ಬದಿಗೆ ಉರುಳಿದ ಬಸ್

ಶಿವಮೊಗ್ಗ : ರಭಸವಾಗಿ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್​ವೊಂದು ರಸ್ತೆ ಬದಿಗೆ ಉರುಳಿ ಬಿದ್ದ ಘಟನೆ ಸಾಗರ ತಾಲೂಕಿನ ಉಳ್ಳೂರು ಕ್ರಾಸ್ ಬಳಿ ನಡೆದಿದೆ.

ಶಿವಮೊಗ್ಗದಿಂದ ಸಾಗರಕ್ಕೆ ಬಸ್ ತೆರಳುತ್ತಿದ್ದ ವೇಳೆ ಉಳ್ಳೂರು ಕ್ರಾಸ್ ಬಳಿ ಬೈಕ್​ವೊಂದು ಅಡ್ಡ ಬಂದಿದ್ದು, ಅಪಘಾತ ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಬಸ್ ಉರುಳಿ ಬಿದ್ದಿದೆ.

ಇದನ್ನು ಓದಿ : ಹಾಡುಹಗಲೇ ಯುವಕನ ಮೇಲೆ ಪುಡಿರೌಡಿಗಳಿಂದ ಅಟ್ಯಾಕ್!​

ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ 20 ಜನರಿಗೆ ಹಾಗೂ ಚಾಲಕ ಸಣ್ಣಪ್ಪ ಗಾಣಿಗೇರ, ನಿರ್ವಾಹಕ ಗೌಡಪ್ಪ ಗೌಡರ್ ಸ್ಥಿತಿ ಗಂಭೀರವಾಗಿದ್ದು, ಗಾಯಾಳುಗಳನ್ನು ಸಾಗರದ ಉಪವಿಭಾಗಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಘಟನೆ ಸಂಬಂಧ ಸಾಗರ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ದೂರು ದಾಖಲು.

RELATED ARTICLES

Related Articles

TRENDING ARTICLES