Thursday, December 26, 2024

ಲೋಕಸಭೆ: ಹೆಚ್ಚು ಸ್ಥಾನ ಗೆಲ್ಲಲು ರಾಜ್ಯದ ಸಂಸದರಿಗೆ ಮೋದಿ ಮಹತ್ವದ ಸಲಹೆ!

ಬೆಂಗಳೂರು: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಚುನಾವಣೆಯಲ್ಲಿ ಗೆಲ್ಲಲು  ಪ್ರಧಾನಿ ಮೋದಿ ಕರ್ನಾಟಕ ಸೇರಿ ದಕ್ಷಿಣ ಭಾರತದ ಸಂಸದರಿಗೆ ಮಹತ್ವದ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಮುಂಬೈನಲ್ಲೂ ಹಿಜಬ್​ ವಿವಾದ: ಕಾಲೇಜಿನಲ್ಲಿ ಬುರ್ಖಾಗೆ ತಡೆ!

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಪ್ರಧಾನಿ ಮೋದಿ ಶತ ಪ್ರಯತ್ನ ನಡೆಸಿದ್ದು, ಕರ್ನಾಟಕ ಸೇರಿದಂತೆ ದಕ್ಷಿಣ ಭಾರತ ಸಂಸದರಿಗೆ ಮಹತ್ವದ ಸಲಹೆ ಸೂಚನೆ ಗಳನ್ನು ನೀಡಿದ್ದಾರೆ.

ಚುನಾವಣೆ ಸಂಬಂಧ ಸಾರ್ವಜನಿಕವಾಗಿ ಭಾಷಣ ಮಾಡುವಾಗ ರಾಜಕೀಯ ನಾಯಕರು ಮಾತಿನ ಮೇಲೆ ಹಿಡಿತವಿರಬೇಕು, ಮಾತಿನ ಮೇಲೆ ಹಿಡಿತ ಇದ್ದಾಗ ಯಾವುದೇ ಕಾರಣಕ್ಕೂ ವಿವಾದ ಉಂಟಾಗುವುದಿಲ್ಲ, ವಿರೋಧ ಪಕ್ಷಗಳ ಟೀಕೆ, ಆರೋಪಗಳಿಗೆ ಕಿವಿಗೊಡಬೇಡಿ, ನೀವೆಲ್ಲರೂ ಜನರಿಗಾಗಿ ಕೆಲಸ ಮಾಡಬೇಕು ಮತ್ತು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಸಕ್ರಿಯರಾಗಿರಬೇಕಾಗಿದೆ.

ಜೊತೆಗೆ ಅಗತ್ಯದ್ದಲ್ಲಿ ಜನರ ಸಮಸ್ಯೆ ಆಲಿಸಲು ಆಯಾ ಕ್ಷೇತ್ರದಲ್ಲಿ ಕಾಲ್‌ ಸೆಂಟರ್‌ ತೆರೆದು ಜನರ ಜೊತೆಗಿದ್ದು ಅವರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸುವಂತೆ ಸೂಚನೆ, ಇದೇ ವೇಳೆ ಕೇಂದ್ರದ ಯೋಜನೆಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು, ರಾಜ್ಯಾದ್ಯಂತ ಅಪೂರ್ಣಗೊಂಡಿರುವ ಯೋಜನೆಗಳು ಮತ್ತು ಕಾಮಗಾರಿಗಳ ಬಗ್ಗೆ ಹೆಚ್ಚು ಗಮನ ಹರಿಸಿ, ಆಗ ಮಾತ್ರ ಜನರು ನಮ್ಮ ಮೇಲೆ ವಿಶ್ವಾಸ ಇಡುತ್ತಾರೆ ಎಂದು ಪ್ರಧಾನಿ ಮೋದಿ ಸಂಸದರಿಗೆ ಸಲಹೆ ನಿಡಿದ್ದಾರೆ.

RELATED ARTICLES

Related Articles

TRENDING ARTICLES