ಮುಂಬೈ: ಮುಂಬೈನಲ್ಲೂ ಉಡುಪಿ ಕಾಲೇಜಿನ ಮಾದರಿಯಲ್ಲೇ ಹಿಜಾಬ್/ಬುರ್ಖಾ ವಿವಾದ ಸೃಷ್ಟಿಯಾಗಿದೆ. ಇಲ್ಲಿನ ಕಾಲೇಜಿನಲ್ಲಿ ವಿದ್ಯಾರ್ಥಿನಿಯ ರಿಗೆ ಬುರ್ಖಾ ತೆಗೆಯುವಂತೆ ಹೇಳಿದ್ದು ವಿವಾದಕ್ಕೀಡಾಗಿದೆ.
ಇದನ್ನೂ ಓದಿ: ನಿಗಮ-ಮಂಡಳಿಗಳ ನೇಮಕಕ್ಕೆ ಸಿದ್ದತೆ: ಶೇ.70 ರಷ್ಟು ಕಾರ್ಯಕರ್ತರಿಗೆ ಮೀಸಲು!
ವಿದ್ಯಾರ್ಥಿನಿಯರ ಪ್ರತಿಭಟನೆ ಬಳಿಕ ಪೊಲೀಸರು ಮಧ್ಯಪ್ರ ವೇಶಿಸಿ ಪ್ರಕರಣ ಸುಖಾಂತ್ಯ ಕಂಡಿದೆ. ‘ಹೊಸ ಶಿಕ್ಷಣ ನೀತಿ ಅಡಿ ಹೊಸ ವಸ್ತ್ರ ಸಂಹಿತೆ ಜಾರಿಗೆ ಬಂದಿದ್ದು, ಧಾರ್ಮಿಕ ವಸ್ತ್ರತೊಡುವಂತಿಲ್ಲ’ ಎಂದು ಕಾಲೇಜು ಸೂಚಿಸಿತ್ತು. ಹೀಗಾಗಿ ಬುರ್ಖಾ ತೆಗೆದು ಕಾಲೇಜು ಪ್ರವೇ ಶಿಸುವಂತೆ ಸೂಚಿಸಲಾಗಿತ್ತು.
ಆಕ್ರೋಶಗೊಂಡ ವಿದ್ಯಾರ್ಥಿನಿಯರು ಹಾಗೂ ಪೋಷಕರು ಪ್ರತಿಭಟನೆ ನಡೆಸಿದರು.ಈ ವೇಳೆ ವಾತಾವರಣ ಉದ್ವಿಗ್ನವಾಗಿತ್ತು. ಬಳಿಕ ಪೊಲೀಸರು ಮಧ್ಯ ಪ್ರವೇಶಿಸಿದಾಗ, ‘ಕ್ಲಾಸಿಗೆ ಬರುವ ಮುನ್ನ ಬುರ್ಖಾ ತೆಗೆಯುತ್ತೇವೆ. ಆದರೆ ಶಿರವಸ್ತ್ರ (ಹಿಜಾಬ್) ತೆಗೆಯಲ್ಲ’ ಎಂದು ವಿದ್ಯಾರ್ಥಿನಿಯರು ಹೇಳಿದರು. ಇದಕ್ಕೆ ಕಾಲೇಜು ಸಮ್ಮತಿ ನೀಡಿತ್ತು.