Wednesday, January 22, 2025

ಹಿಂದೂ ಯುವತಿಯರ ಕುರಿತು ಪೋಸ್ಟ್ ಮಾಡಿದ ವಿದ್ಯಾರ್ಥಿ

ಹುಬ್ಬಳ್ಳಿ : ಹಿಂದೂ ಯುವತಿಯರ ಫೋಟೊಗಳನ್ನು ಯುವಕನೋರ್ವ ಅಶ್ಲೀಲವಾಗಿ ಎಡಿಟ್​ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಘಟನೆ ನಗರದ ಸಮರ್ಥ ಕಾಲೇಜಿನಲ್ಲಿ ನಡೆದಿದೆ.

ಇಲ್ಲಿನ ಖಾಸಗಿ ಕಾಲೇಜಿಲ್ಲಿ ವ್ಯಾಸಂಗ ಮಾಡುತ್ತಿದ್ದ ಯುವಕನೋರ್ವ ವತಿಯರ ಫೋಟೊಗಳನ್ನು ಅಶ್ಲೀಲಕರವಾಗಿ ಎಡಿಟ್​ ಮಾಡಿ ಮುಸ್ಲಿಂ ಯುವವಕನ ಹೆಸರಿನಲ್ಲಿ ಇನ್ಸ್ಟಾಗ್ರಾಮ್​ ನಲ್ಲಿ ಪೋಸ್ಟ್ ಮಾಡುತ್ತಿದ್ದ, ಪೋಸ್ಟ್​ ಮಾಡಿದ್ದಲ್ಲದೇ ಧಮ್​ ಇದ್ರೆ ನನ್ನ ಹಿಡಿಯಿರಿ ಎಂದು ಹುಬ್ಬಳ್ಳಿ ಪೊಲೀಸ್​ ಇಲಾಖೆಗೆ ಸವಾಲ್​ ಎಸೆದ್ದಿದ್ದ.

ಇದನ್ನು ಓದಿ : ಮಾನನಷ್ಟ ಮೊಕದ್ದಮೆ ಪ್ರಕರಣ: ರಾಹುಲ್​ ಗಾಂಧಿಗೆ ಬಿಗ್ ರಿಲೀಫ್​!​

ಈ ಪೋಸ್ಟ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸರು ಕಾಲೇಜಿಗೆ ಭೇಟಿ ನೀಡಿ ಪೋಸ್ಟ್​ ಮಾಡಿದ ಯುವಕನ್ನು ವಶಕ್ಕೆ ಪಡೆದಿದ್ದು ಹೆಚ್ಚಿನ ಮಾಹಿತಿಯನ್ನು ಕಾಲೇಜು ಪ್ರಾಂಶುಪಾರಿಂದ ಮಾಹಿತಿ ಪಡೆದಿದ್ದಾರೆ. ​

RELATED ARTICLES

Related Articles

TRENDING ARTICLES