Wednesday, January 22, 2025

ಪತ್ನಿ ಬೆರಳನ್ನೇ ಕಚ್ಚಿ ತಿಂದ ಸೈಕೋ ಪತಿ!

ಬೆಂಗಳೂರು : ಸೈಕೋ ಪತಿಯೊಬ್ಬ ಕ್ಷುಲ್ಲಕ ಕಾರಣಕ್ಕೆ ತನ್ನ ಪತ್ನಿಯ ಕೈ ಬೆರಳನ್ನೇ ಕಚ್ಚಿ ತಿಂದಿರುವ ಘಟನೆ ಸಿಲಿಕಾನ್​ ಸಿಟಿಯನ್ನೆ ಬೆಚ್ಚಿಬೀಳಿಸಿರುವ ಘಟನೆ ನಗರದ ಕೋಣನಕುಂಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇದನ್ನೂ ಓದಿ: ಪಾರ್ಲಿಮೆಂಟ್ ಚುನಾವಣೆಯಲ್ಲಿ 20-24 ಸೀಟು ಗೆಲ್ಲುವ ಭರವಸೆ: ಸಿಎಂ ಸಿದ್ದರಾಮಯ್ಯ

ಪುಷ್ಪ ಪತಿಯಿಂದ ದೈಹಿಕ ಹಲ್ಲೆಗೊಳಗಾದ ಪತ್ನಿ, ಆರೋಪಿ ವಿಜಯಕುಮಾರ್ ತನ್ನಿಂದ ಪ್ರತ್ಯೇಕವಾಗಿ ವಾಸವಿದ್ದ ಹೆಂಡತಿ ಮನೆಗೆ ಬಂದು ಜಗಳ ತೆಗೆದಿದ್ದಾನೆ, ಈ ವೇಳೆ ತನ್ನ ಪತ್ನಿ ಪುಷ್ಪಳ ಎಡಗೈ ಬೆರಳನ್ನೆ ಕಚ್ಚಿ ತಿಂದಿದ್ದಾನೆ.

ಕಳೆದ 23 ವರ್ಷಗಳ ಹಿಂದೆ ಪುಷ್ಪ ಮತ್ತು ವಿಜಯ್​ ಕುಮಾರ್​ ಮದುವೆಯಾಗಿದ್ದರು, ಮದುವೆಯಾದ ಕೆಲ ವರ್ಷಗಳಿಂದ ಪತ್ನಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದ. ಗಂಡನ ಚಿತ್ರಹಿಂಸೆ ತಾಳಲಾಗದೇ ಪುಷ್ಪಾ ಗಂಡನಿಂದ ಬೇಸತ್ತು ಬೇರೆಡೆ ಮನೆ ಮಾಡಿ ತನ್ನ ಮಗನೊಂದಿಗೆ ವಾಸವಿದ್ದಳು,

ಜುಲೈ 28ರಂದು ಪುಷ್ಪಾ ಇದ್ದ ಮನೆಗೆ ಹೋಗಿದ್ದ ವಿಕಯ್​ ಕುಮಾರ್​ ತನ್ನ ಹೆಂಡತಿಯೊಂದಿಗೆ ಜಗಳಕ್ಕೆ ಇಳಿದಿದ್ದಾನೆ, ಬಳಿಕ ಜಗಳ ವಿಕೋಪಕಕ್ಕೆ ತಿರುಗಿ ಪುಷ್ಪಾಳ ಎಡಗೈ ಬೆರಳನ್ನ ಕಚ್ಚಿ ತಿಂದು ಪೈಶಾಚಿಕತೆ ಮೆರೆದಿದ್ದಾನೆ.

ಘಟನೆಯ ಬಳಿಕ ಪತಿಯ ವಿರುದ್ಧ ಪುಷ್ಪಾ, ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

RELATED ARTICLES

Related Articles

TRENDING ARTICLES