Sunday, December 22, 2024

ಎಗ್​ ರೈಸ್​ ತಿನ್ನಲು ಬಂದವರ ಮೇಲೆ ಬಿತ್ತು ನೀರಿನ ಟ್ಯಾಂಕ್​: ಇಬ್ಬರ ದಾರುಣ ಸಾವು!  

ಬೆಂಗಳೂರು: ತಳ್ಳುವ ಗಾಡಿಯಲ್ಲಿ ಎಗ್​ ರೈಸ್​ ಮಾರಾಟ ಮಾಡುತ್ತಿದ್ದ ವೇಳೆ ಮನೆಯ ಮೇಲಿದ್ದ (ಸಿಂಟ್ಯಾಕ್​)​ ವಾಟರ್​ ಟ್ಯಾಂಕ್ ಬಿದ್ದ ಪರಿಣಾಮ ಇಬ್ಬರು ದುರ್ಮರಣ ಹಾಗು ಓರ್ವನಿಗೆ ಗಂಭೀರ ಗಾಯಗಳಾಗಿರುವ ಘಟನೆ ನಗರದ ಶಿವಾಜಿ ನಗರದಲ್ಲಿ ನಡೆದಿದೆ.

ಇದನ್ನೂ ಓದಿ: ಪತ್ನಿ ಬೆರಳನ್ನೇ ಕಚ್ಚಿ ತಿಂದ ಸೈಕೋ ಪತಿ!

ಬುಧವಾರ ರಾತ್ರಿ 10.30 ರ ಸುಮಾರಿಗೆ ಶಿವಾಜಿನಗರದ ಬಸ್​ ಸ್ಟಾಂಡ್​ ನಲ್ಲಿರುವ ಕಟ್ಟಡದ ನಾಲ್ಕನೆ ಮಹಡಿ ಮೇಲಿಂದ ಟ್ಯಾಂಕ್​ ಬಿದ್ದಿದೆ. ಈ ದುರ್ಘಟನೆಯಲ್ಲಿ ಎಗ್​ ರೈಸ್​ ಅಂಗಡಿ ಮಾಲೀಕ ಅರುಳ್​ ಕುಮಾರ್​ ಹಾಗು ಅಂಗಡಿಗೆ ಎಗ್​ ರೈಸ್​ ತಿನ್ನಲು ಬಂದಿದ್ದ ವ್ಯಕ್ತಿ ಸಾವಿಗೀಡಾಗಿದ್ದಾರೆ, ಮತ್ತೊಬ್ಬ ಕಮಲ್‌ ಎಂಬ ಗ್ರಾಹಕನ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಆಗಮಿಸಿದ ಎಫ್​ ಎಸ್​ ಎಲ್​ ತಂಡ ಕುಸಿದು ಬಿದ್ದ ಓವರ್‌ ಟ್ಯಾಂಕ್‌ ಪರಿಶೀಲನೆ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES