ತುಮಕೂರು : ಪೇ 40% ಸಿಎಂ ಎಂದು ಹೇಳಿದ್ರು, ಈಗ 60% ಸಿಎಂ ಎಂದು ನಾವು ಹೇಳಬೇಕಾಗುತ್ತೆ. ಕಾಂಗ್ರೆಸ್ ಸರ್ಕಾರದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ತುರುವೇಕೆರೆ ಶಾಸಕ ಎಂ.ಟಿ ಕೃಷ್ಣಪ್ಪ ವಾಗ್ದಾಳಿ ನಡೆಸಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಲ್ಲಿ ವರ್ಗಾವಣೆ ದಂಧೆ, ಭ್ರಷ್ಟಾಚಾರ ನಡೆಯುತ್ತಾ ಇದೆ. ಗೃಹಸಚಿವರನ್ನ ಬಿಟ್ರೆ ಉಳಿದೆಲ್ಲಾ ಖಾತೆಯಲ್ಲೂ ದಂಧೆ ನಡೆಯುತ್ತಿದೆ. ಗೃಹಸಚಿವರು ಇಂತಹ ಕೆಲಸಕ್ಕೆಲ್ಲಾ ಹೋಗಲ್ಲ ಎಂದು ಕಿಡಿಕಾರಿದ್ದಾರೆ.
ಅನುದಾನ ಕೋಡೋ ಯೋಗ್ಯತೆ ಇಲ್ಲ
ಇನ್ನು ಶಾಸಕರ ಅನುದಾನ ಬಿಡುಗಡೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಶಾಸಕರಾಗಿ 3 ತಿಂಗಳಾಗಿದೆ. ಅನುದಾನ ಕೋಡೋ ಯೋಗ್ಯತೆ ಇಲ್ಲ, ಇದೆಂಥಾ ಸರ್ಕಾರ ರೀ.. ಇಂತಹ ಸರ್ಕಾರಗಳು ಬೇಕಾ ಜನಕ್ಕೆ. ಇನ್ನೊಂದು ಎರಡು ತಿಂಗಳು ಕಳೆದ್ರೆ ದಂಗೆ ಎಳುತ್ತಾರೆ. ಕಾಂಗ್ರೆಸ್ನವರೇ ದಂಗೆ ಏಳ್ತಾರೆ. ಸಿಎಂ ಸಿದ್ದರಾಮಯ್ಯ ಪುಕ್ಕಟೆ ಸಿದ್ದರಾಮಣ್ಣ ಎಂದು ಎಂ.ಟಿ. ಕೃಷ್ಣಪ್ಪ ಲೇವಡಿ ಮಾಡಿದ್ದಾರೆ.
ನೇರವಾಗಿದ್ದಾರೆ ಇರೋದರಲ್ಲಿ ಪ್ರಾಮಾಣಿಕರಿದ್ದಾರೆ. ಅವರ ಬಗ್ಗೆ ಗೌರವ ಇದೆ. ಉಳಿದ ಸಚಿವರು ಸಂತೆ ಮಾಡಿಕೊಂಡಿದ್ದಾರೆ, ವ್ಯಾಪಾರ ಮಾಡುತ್ತಿದ್ದಾರೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರನ್ನು ಹಾಡಿ ಹೊಗಳಿದ್ದಾರೆ.