Sunday, December 22, 2024

ಖರ್ಗೆ ಮೈ ಬಣ್ಣದ ಬಗ್ಗೆ ವ್ಯಂಗ್ಯವಾಡಿದ ಶಾಸಕ ಆರಗ!

ಶಿವಮೊಗ್ಗ : ಟೀಕಿಸುವ ಭರದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಮೈ ಬಣ್ಣದ ಕುರಿತು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ನಾಲಗೆ ಹರಿ ಬಿಟ್ಟಿರುವ ಘಟನೆ ತೀರ್ಥಹಳ್ಳಿಯಲ್ಲಿ ನಡೆದಿದೆ.

ಇದನ್ನೂ ಓದಿ: ಮೊಬೈಲ್​ ಚಾರ್ಜರ್​ಗೆ 8 ತಿಂಗಳ ಮಗು ಧಾರುಣ ಸಾವು!

ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ತೀರ್ಥಹಳ್ಳಿಯಲ್ಲಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಮಾತನಾಡಿದ ಅವರು, ಕಸ್ತೂರಿ ರಂಗನ್​ ವರದಿ ಜಾರಿಯಾದರೇ ಇಲ್ಲಿನ ರಂಗನ ಕಟ್ಟೆ ಪಕ್ಕದ ಕಾಡು ಬಿಂಟ್ಲ ಪ್ರದೇಶದ ಸುತ್ತ 8 ಕಿ.ಮಿ ಬಫರ್​ ಜೋನ್​ ವ್ಯಾಪ್ತಿಗೆ ಬರುತ್ತದೆ ಇಲ್ಲಿ ಯಾವುದೇ ಯೋಜನೆಗಳನ್ನು ಜಾರಿ ಮಾಡಲು ಬರುವುದಿಲ್ಲ, ಯಾವುದೇ ಕಾಮಗಾರಿ ಮಾಡಬೇಕಾದರೇ ಕೇಂದ್ರ ಸರ್ಕಾರದ ಅನುಮತಿ ಬೇಕಾಗುತ್ತದೆ, ಇದರಿಂದ ಜನ ಬದುಕುವುದು ಕಷ್ಟವಾಗುತ್ತದೆ.

ಈ ಕುರಿತು ಸರ್ಕಾರದ ನಿಲುವನ್ನು ಸಿಎಂ ಸಿದ್ದರಾಮಯ್ಯನವರು ಕೇಂದ್ರ ಸರ್ಕಾರಕ್ಕೆ ಸ್ಪಷ್ಟಪಡಿಸಬೇಕಾಗುತ್ತದೆ, ನಮ್ಮ ದುರಾದೃಷ್ಟವೇನೆಂದರೇ  ಈ ಬಗ್ಗೆ ಮಾತನಾಡಬೇಕಾದವರು ಫಾರೆಸ್ಟ್​ ನೆರಳಿಲ್ಲದವರು, ಫಾರೆಸ್ಟ್ ಕಾಣದವರು ಮರ ಗಿಡ ನೆರಳು ಗೊತ್ತಿಲ್ಲದವರು  ನಮ್ಮ ಖರ್ಗೆಯವರನ್ನ ನೋಡಿದ್ರೇ ಗೊತ್ತಾಗುತ್ತೆ ಪಾಪ, ತಲೆ ಕೂದಲು ಮುಚ್ಚಿಕೊಂಡಿದ್ದಕ್ಕೆ ಸ್ವಲ್ಪ ಉಳಿದುಕೊಂಡಿದ್ದಾರೆ, ಅದೇ ಅವರಿಗೆ ನೆರಳು ಎಂದು ಶಾಸಕ ಆರಗ ಜ್ಞಾನೇಂದ್ರ  ವ್ಯಂಗ್ಯವಾಡಿದ್ದಾರೆ.

RELATED ARTICLES

Related Articles

TRENDING ARTICLES