Monday, December 23, 2024

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ದಲಿತ ನಾಯಕನ ಹೆಸರು ಮುನ್ನೆಲೆಗೆ!

ಬೆಂಗಳೂರು : ದಿನದಿಂದ ದಿನಕ್ಕೆ ಕುತೂಹಲ ಮೂಡಿಸುತ್ತಿರುವ ರಾಜ್ಯ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿಗಳ ಆಯ್ಕೆ, ಇದೀಗ ದಲಿತ ಮುಖಂಡನ ಹೆಸರು ಮುನ್ನೆಲೆಗೆ ಬಂದಿದೆ.

ಇದನ್ನೂ ಓದಿ: ಬಹುರಾಷ್ಟ್ರೀಯ ಕಂಪೆನಿ ಕೀಟನಾಶಕಕ್ಕೆ 20 ಲಕ್ಷ ಟೊಮೊಟೊ ಬೆಳೆ ನಾಶ: ರೈತ ಕಂಗಾಲು!

ರಾಜ್ಯ ವಿಧಾನಸಭಾ ಚುನಾವಣೆ ಕಳೆದು ತಿಂಗಳುಗಳೆ ಕಳೆದಿದ್ದರು ವಿಪಕ್ಷ ನಾಯಕ ಮತ್ತು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಮರ್ಥ ನಾಯಕನ ಆಯ್ಕೆ ಮಾಡುವಲ್ಲಿ ಹೈಕಮಾಂಡ್​ ಸೋತಿದೆ, ನಾಯಕರ ಆಯ್ಕೆಗೆ ಇನ್ನೂ ತೆರೆಮರೆಯ ಕಸರತ್ತುಗಳನ್ನು ನಡೆಸುತ್ತಿದೆ.

ಆರಂಭದಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಲಿಂಗಾಯತ – ಒಕ್ಕಲಿಗ ನಾಯಕರ ನಡುವೆ ಪೈಪೋಟಿ ಏರ್ಪಟ್ಟಿತ್ತು, ಈ ಮೊದಲು ಸಿ.ಟಿ.ರವಿ, ಶೋಭಾ ಕರಂದ್ಲಾಜೆ, ಅಶ್ವತ್ಥ್‌ ನಾರಾಯಣ, ಬಿ.ವೈ.ವಿಜಯೇಂದ್ರ ಹೆಸರು ಮುಂಚೂಣಿಯಲ್ಲಿತ್ತು

ಆದರೇ, ಇದೀಗ ಬಿಜೆಪಿ ಹೈಕಮಾಂಡ್​ ದಲಿತ ಸಮುದಾಯದ ಪರ ಒಲವು ತೋರಿದೆ, ಈ ಹಿನ್ನೆಲೆಯಲ್ಲಿ ಮಾಜಿ ಶಾಸಕ ಅರವಿಂದ ಲಿಂಬಾವಳಿಯವರ ಹೆಸರು ಲಿಂಬಾವಳಿ ಹೆಸರು ಮುನ್ನೆಲೆಗೆ ಬಂದಿದೆ,

ಸದ್ಯ ಇನ್ನೊಂದು ವಾರದಲ್ಲಿ ಹೈಕಮಾಂಡ್​ ರಾಜ್ಯಾಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕನ ಹೆಸರು ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

RELATED ARTICLES

Related Articles

TRENDING ARTICLES