ಮೈಸೂರು : ಕೇಂದ್ರ ಕಾರಾಗೃಹದಲ್ಲಿರುವ ಸ್ಯಾಂಟ್ರೋ ರವಿ ಕಾಟಕ್ಕೆ ಜೈಲಿನ ಅಧಿಕಾರಿಗಳು ಬೇಸತ್ತು ಹೋಗಿದ್ದಾರೆ. ಸ್ಯಾಂಟ್ರೋ ರವಿ ಕಾಟಕ್ಕೆ ಜೈಲಿನ ಅಧಿಕಾರಿಗಳು ರೋಸಿ ಹೋಗಿದ್ದು, ರವಿಯನ್ನ ಮೈಸೂರು ಜೈಲಿನಿಂದ ಕೇಂದ್ರ ಕಾರಾಗೃಹ ಬೆಂಗಳೂರಿಗೆ ಶಿಫ್ಟ್ ಮಾಡುವಂತೆ ನ್ಯಾಯಾಧೀಶರಿಗೆ ಪತ್ರ ಬರೆದಿದ್ದಾರೆ.
ಇದನ್ನೂ ಓದಿ: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ದಲಿತ ನಾಯಕನ ಹೆಸರು ಮುನ್ನೆಲೆಗೆ!
ಏಪ್ರಿಲ್ 13ರಂದು ಮೈಸೂರು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರು ಪತ್ರ ಬರೆದಿದ್ದಾರೆ. ಮೈಸೂರು ಜೈಲಿನಲ್ಲಿ ವಿಚಾರಣ ಕೈದಿಯಾಗಿರುವ ಸ್ಯಾಂಟ್ರೋ ರವಿ, ಜೈಲಿನ ಅಧಿಕಾರಿಗಳ ಜೊತೆ ಅನುಚಿತವಾಗಿ ವರ್ತನೆ ಮಾಡುತ್ತಿದ್ದಾನೆ. ಜೈಲಿನ ನಿಯಮಗಳನ್ನು ಪಾಲಿಸದೆ ಸಹ ಕೈದಿಗಳ ಜೊತೆ ಗಲಾಟೆ ಮಾಡಿಕೊಳ್ಳುತ್ತಿದ್ದಾನೆ.
ಸೆಲ್ ಬೀಗ ಹಾಕುವಾಗ, ಕೊಠಡಿ ತಪಾಸಣೆ ಮಾಡುವಾಗ ಸಿಬ್ಬಂದಿಗಳ ಮೇಲೆ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡುತ್ತಿದ್ದಾನೆ. ಸ್ಯಾಂಟ್ರೋ ರವಿ ಕೊಠಡಿಗೆ ತೆರಳುವ ಪೊಲೀಸರು ಶೂ ಹೊರಗಡೆ ಬಿಟ್ಟು ಹೋಗಬೇಕು, ನೀವು ಜುಜುಬಿ ವೀಕ್ಷಕರಷ್ಟೇ ಎಂದು ಬೈಯುತ್ತಿದ್ದಾನೆ. ಸ್ಯಾಂಟ್ರೋ ರವಿ ಗಲಾಟೆಯನ್ನ ಬಾಡಿ ವಾರ್ನ್ ಕ್ಯಾಮಾರಾದಲ್ಲಿ ಜೈಲು ಅಧಿಕಾರಿಗಳು ರೆಕಾರ್ಡ್ ಮಾಡಿಕೊಂಡಿದ್ದಾರೆ.
ನನಗೆ ನಿಮ್ಮ ಮೇಲಾಧಿಕಾರಿಗಳು ಗೊತ್ತಿದ್ದಾರೆ. ನಿಮ್ಮನ್ನ ಟ್ರಾನ್ಸಫರ್ ಮಾಡಿಸಿ ಬಿಡುತ್ತೇನೆಂದು ಅಧಿಕಾರಿಗಳ ಜೊತೆ ರವಿ ಗಲಾಟೆ ಮಾಡುತ್ತಿದ್ದಾನೆಂದು ನ್ಯಾಯಾಧೀಶರಿಗೆ ಪತ್ರ ಬರೆಯಲಾಗಿದೆ.