Monday, December 23, 2024

2 ಭಾಗಗಳಲ್ಲಿ ‘ಸಿಎಂ ಸಿದ್ದು’ ಬಯೋಪಿಕ್.. ಸೇತುಪತಿ ಸಿದ್ಧ

ಬೆಂಗಳೂರು : ಕರ್ನಾಟಕದ ರಾಜಕೀಯ ಧುರೀಣ ಮುಖ್ಯಮಂತ್ರಿ ಸಿದ್ದರಾಮಯ್ಯ ಬಯೋಪಿಕ್ ಬರೋದು ಪಕ್ಕಾ ಆಗಿದೆ. ಸಿನಿಮಾಗೆ ಟೈಟಲ್ ಕೂಡ ಫೈನಲ್ ಆಗಿದ್ದು, ತಮಿಳಿನ ಮೋಸ್ಟ್ ವರ್ಸಟೈಲ್ ಆ್ಯಕ್ಟರ್ ವಿಜಯ್ ಸೇತುಪತಿ ಸಿದ್ದರಾಮಯ್ಯ ಪಾತ್ರಕ್ಕೆ ಸಿದ್ಧರಾಗ್ತಿದ್ದಾರೆ.

ಹೌದು, ಪಿಎಂ ನರೇಂದ್ರ ಮೋದಿ, ಜಯಲಲಿತಾ ಕುರಿತ ತಲೈವಿ, ಆಂಧ್ರದ ಮಾಜಿ ಸಿಎಂ ಎನ್​ಟಿಆರ್ ಕುರಿತ ಕಥಾನಾಯಕುಡು ಸಿನಿಮಾಗಳು ಈಗಾಗಲೇ ದೊಡ್ಡ ಮಟ್ಟಕ್ಕೆ ಸದ್ದು ಮಾಡಿವೆ. ಸದ್ಯ ಕಂಗನಾ ರಣಾವತ್ ಇಂದಿರಾ ಗಾಂಧಿ ಬಯೋಪಿಕ್​​ನಲ್ಲಿ ನಟಿಸುತ್ತಿದ್ದು, ಇತ್ತ ಕರುನಾಡಿನ ಡೈನಾಮಿಕ್ ಲೀಡರ್ ಸಿದ್ದರಾಮಯ್ಯ ಕುರಿತ ಸಿನಿಮಾ ಬರೋದು ಕನ್ಫರ್ಮ್ ಆಗಿದೆ.

ಚಿತ್ರಕ್ಕೆ ‘ಲೀಡರ್ ರಾಮಯ್ಯ’ ಅಂತ ಟೈಟಲ್ ಇಡಲಾಗಿದೆ. ಸಿದ್ದರಾಮಯ್ಯನವರ ಬಾಲ್ಯ, ಶಿಕ್ಷಣ, ಕಾಲೇಜು ದಿನಗಳು, ಹೋರಾಟದ ಬದುಕು, ವಕೀಲ ವೃತ್ತಿ, ರಾಜಕಾರಣ ಎಂಟ್ರಿ, ಸಿಎಂ ಸೇರಿದಂತೆ ಕಂಪ್ಲೀಟ್ ಚಿತ್ರಣ ಕಟ್ಟಿಕೊಡಲಿದೆ.

ಮೊದಲ ಭಾಗ ಸಿದ್ದು ಬಾಲ್ಯ

ಅಂದಹಾಗೆ ಸಿನಿಮಾ ಎರಡೆರಡು ಭಾಗಗಳಲ್ಲಿ ತೆರೆಗೆ ಬರಲಿದ್ದು, ಮೊದಲ ಭಾಗ ಅವ್ರ ಬಾಲ್ಯ ಹಾಗೂ ಕಾಲೇಜು ಡೇಸ್, ಹೋರಾಟದ ದಿನಗಳಿಗೆ ಸಾಕ್ಷಿ ಆಗಲಿದೆಯಂತೆ. ಎರಡನೇ ಭಾಗದಲ್ಲಿ ಅವ್ರ ವಕೀಲ ವೃತ್ತಿ, ರಾಜಕಾರಣಕ್ಕೆ ಧುಮುಕಿದ ದಿನಗಳು ಸೇರಿದಂತೆ ಸಿಎಂ ಆಗಿ, ಪ್ರತಿಪಕ್ಷ ನಾಯಕರಾಗಿ ಏನೆಲ್ಲಾ ಮಾಡಿದ್ರು ಅನ್ನೋದ್ರ ಕುರಿತು ಸಿನಿಮಾ ಮಾಡಲು ಸಜ್ಜಾಗಿದ್ದಾರೆ ನಿರ್ದೇಶಕ ಸತ್ಯ ರತ್ನಂ.

ಯಾವ್ಯಾವ ಭಾಷೆಯಲ್ಲಿ ತೆರೆಗೆ?

ಈ ಸಿನಿಮಾ ಎಂ.ಎಸ್. ಕ್ರಿಯೇಟಿವ್ ವರ್ಕ್ಸ್ ಬ್ಯಾನರ್​​ನಡಿ ನಿರ್ಮಾಣ ಆಗ್ತಿದ್ದು, ಕನ್ನಡದ ಜೊತೆ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲಿ ಪ್ಯಾನ್ ಇಂಡಿಯಾ ಮೂವಿಯಾಗಿ ತೆರೆಗೆ ಬರಲಿದೆ. ಶಶಾಂಕ್ ಶೇಷಗಿರಿ ಈಗಾಗ್ಲೇ ಮ್ಯೂಸಿಕ್ ಕಂಪೋಸ್ ಮಾಡ್ತಿದ್ದು, ಆ ಬಗ್ಗೆ ಟ್ವೀಟ್ ಮೂಲಕ ಎಕ್ಸ್​ಕ್ಲೂಸಿವ್ ಮಾಹಿತಿ ಕೂಡ ಹೊರಬಿದ್ದಿದೆ.

ಯಂಗ್ ಸಿದ್ದು ಆಗಿ ನಿರೂಪ್ ಬಣ್ಣ

‘ಎ ಕಿಂಗ್ ರೈಸ್ಡ್ ಬೈ ದಿ ಪೀಪಲ್’ ಅನ್ನೋ ಟ್ಯಾಗ್​ಲೈನ್ ಇರೋ ಲೀಡರ್ ರಾಮಯ್ಯ ಸಿನಿಮಾದ ಮೊದಲ ಭಾಗದಲ್ಲಿ ನಟ ನಿರೂಪ್ ಭಂಡಾರಿ ನಟಿಸಲಿದ್ದಾರೆ. ಯಂಗ್ ಸಿದ್ದರಾಮಯ್ಯನಾಗಿ ನಿರೂಪ್ ಬಣ್ಣ ಹಚ್ಚಲಿದ್ದಾರೆ. ಇನ್ನು ಎರಡನೇ ಭಾಗದ ಲೀಡರ್ ರಾಮಯ್ಯ ಸಿನಿಮಾದಲ್ಲಿ ಸಿದ್ದರಾಮಯ್ಯನಾಗಿ ವಿಜಯ್ ಸೇತುಪತಿ ನಟಿಸಲಿದ್ದಾರೆ.

  • ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES