Friday, December 27, 2024

ಮೊಬೈಲ್​ ಚಾರ್ಜರ್​ಗೆ 8 ತಿಂಗಳ ಮಗು ಧಾರುಣ ಸಾವು!

ಕಾರವಾರ : ಮೊಬೈಲ್‌ ಚಾರ್ಜರ್‌ ಶಾಕ್‌ನಿಂದಾಗಿ 8 ತಿಂಗಳ ಮಗು ಧಾರುಣ ಸಾವಿಗೀಡಾಗಿರುವ ಘಟನೆ ತಾಲ್ಲೂಕಿನ ಸಿದ್ದರ ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ: ಸ್ಯಾಂಟ್ರೋ ರವಿ ಕಾಟಕ್ಕೆ ಬೇಸತ್ತ ಪೊಲೀಸರು: ಅಧಿಕಾರಿಗಳಿಂದ ನ್ಯಾಯಾಧೀಶರಿಗೆ ಪತ್ರ

ಸಂತೋಷ್​ ಸಂಜನಾ ದಂಪತಿಯ 8 ವರ್ಷದ ಮಗು ಸಾನಿಧ್ಯ, ಸಾವಿಗೀಡಾದ ನತದೃಷ್ಟೆ, ಮನೆಯಲ್ಲಿ ಮೊಬೈಲ್​ ರೀಚಾರ್ಜ್​ ಮಾಡಲು ಇಟ್ಟು ಚಾರ್ಜ್​ ಆದ ಬಳಿಕ ಸ್ವಿಚ್​ ಆಫ್​ ಮಾಡದೇ ಹಾಗೆ ಬಿಡಲಾಗಿತ್ತು, ಈ ವೇಳೆ ಮಗು ಆಟವಾಡುತ್ತ ಚಾರ್ಜರ್​ನ್ನು ಬಾಯಿಗೆ ಇಟ್ಟುಕೊಂಡಾಗ ವಿದ್ಯುತ್​ ಶಾಕ್​ ತಗುಲಿ ಅಸ್ವಸ್ಥಗೊಂಡಿದೆ. ಕೂಡಲೇ ಆಸ್ಪತ್ರೆಗೆ ದಾಖಲಿಸಿಲಾಯಿತಾದರೂ ಮಗು ಬದುಕುಳಿಯಲಿಲ್ಲ.

ಸದ್ಯ ಈ ಪ್ರಕರಣವು ಕಾರವಾರ ಗ್ರಾಮೀಣ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

RELATED ARTICLES

Related Articles

TRENDING ARTICLES