Monday, December 23, 2024

ಇಂದಿನಿಂದ ಹಾಲಿನ ಬೆಲೆ ಏರಿಕೆ : ಪರಿಷ್ಕೃತ ದರ ಪಟ್ಟಿ ಇಲ್ಲಿದೆ!

ಬೆಂಗಳೂರು: ರಾಜ್ಯಾದ್ಯಂತ ಇಂದಿನಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ ತಟ್ಟಲಿದ್ದು ಅಗತ್ಯ ವಸ್ತುಗಳಾದ ಹಾಲಿನ ಪರಿಷ್ಕೃತ ದರ ಏರಿಕೆ ಇಂದಿನಿಂದ ಜಾರಿಯಾಗುತ್ತಿದೆ.

ಇದನ್ನೂ ಓದಿ : ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ : ಡಿಕೆಶಿಗೆ ಸುಪ್ರೀಂ ರೀಲೀಫ್!​

ನಂದಿನಿ ಹಾಲಿನ ದರ ಇಂದಿನಿಂದ ದುಬಾರಿಯಾಗಿದ್ದು 1 ಲೀಟರ್ ಹಾಲಿನ ಬೆಲೆ 3 ರೂಪಾಯಿ ಹೆಚ್ಚಳ,  ಪ್ರತಿ ಲೀಟರ್‌ ಹಾಲುನ ದರ ಒಟ್ಟು 42 ರೂಪಾಯಿ ಆಗಲಿದೆ, ಇನ್ನೂ, ಪ್ರತಿ ಲೀಟರ್ ಮೊಸರಿಗೂ 3 ರೂಪಾಯಿ ಹೆಚ್ಚಳ ಹೆಚ್ಚಳವಾಗುತ್ತಿದೆ.

ಹಾಲಿನ ದರ ಹೆಚ್ಚಳ ಬೆನ್ನಲ್ಲೇ ಹೊಟೆಲ್​ಗಳಲ್ಲಿ ಕಾಫಿ, ಟೀ  ಬೆಲೆಯೂ ಹೆಚ್ಚಳ ಮಾಡಲು ಹೊಟೆಲ್​ ಮಾಲೀಕರ ಸಂಘವು ತೀರ್ಮಾನಿಸಿದ್ದು ಇದರೊಂದಿಗೆ ಶೇ.10ರಷ್ಟು ದರ ಹೆಚ್ಚಳ ಏರಿಕೆಯೊಂದಿಗೆ ಇಂದಿನಿಂದ ಗ್ರಾಹಕರ ಜೇಬಿಜೆ ಮತ್ತಷ್ಟು ಹೊಡೆತ ಬೀಳಲಿದೆ.

ಇಂದಿನಿಂದ ಜಾರಿಯಾದ ಪರಿಷ್ಕೃತ ಹಾಲಿನ ದರ ಏರಿಕೆಯ ಪಟ್ಟಿ:

           ಲೀಟರ್                   ಹಿಂದಿನ ದರ                       ಈಗಿನ ದರ

        • ಟೋನ್ಡ್ ಹಾಲು                ₹39                            ₹42
        • ಹೋಮೋಜಿನೈಸ್ಡ್             ₹40                            ₹43
        • ಸ್ಪೆಷಲ್‌ ಹಾಲು                ₹45                            ₹48
        • ಶುಭಂ ಹಾಲು                 ₹45                             ₹48
        • ಸಮೃದ್ಧಿ ಹಾಲು               ₹50                            ₹53
        • ಸಂತೃಪ್ತಿ ಹಾಲು               ₹52                            ₹55
        • ಡಬ್ಬಲ್‌ ಟೋನ್ಡ್ ಹಾಲು     ₹38                            ₹41
        • ಮೊಸರು ಪ್ರತಿ ಲೀ.ಗೆ          ₹47                            ₹50

RELATED ARTICLES

Related Articles

TRENDING ARTICLES