ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂದು ಲೋಕಮಾನ್ಯ ತಿಲಕ್ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಧಾನಿ ನರೇಂದ್ರ ಮೋದಿ ಇಂದು ಪುಣೆಗೆ ಭೇಟಿ ನೀಡಿದ್ದು, ಅವರಿಗೆ ಪುಣೆಯಲ್ಲಿ ತಿಲಕ್ ಸ್ಮಾರಕ ಮಂದಿರ ಟ್ರಸ್ಟ್ ವತಿಯಿಂದ ಇಂದು ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇನ್ನು ಪ್ರಶಸ್ತಿ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರಶಸ್ತಿ ಜತೆಗೆ ಜವಾಬ್ದಾರಿ ಕೂಡ ಹೆಚ್ಚಾಗುತ್ತದೆ. ಈ ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿಯನ್ನು 140 ಕೋಟಿ ಜನರಿಗೆ ಅರ್ಪಿಸುತ್ತೇನೆ. ಇದರೊಂದಿಗೆ ಪ್ರಶಸ್ತಿಯೊಂದಿಗೆ ಪಡೆದ ಮೊತ್ತವನ್ನು ನಮಾಮಿ ಗಂಗೆ ಯೋಜನೆಗೆ ನೀಡುವುದಾಗಿ ಪ್ರಧಾನಿ ಮೋದಿ ಘೋಷಿಸಿದರು.
पुण्यामध्ये लोकमान्य टिळक राष्ट्रीय पुरस्कार प्राप्त झाल्याने अतिशय सन्मानित झालो आहे. pic.twitter.com/k0jSmr18aW
— Narendra Modi (@narendramodi) August 1, 2023
ಇದನ್ನೂ ಓದಿ : ಮೋದಿಗೆ ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿ
ಆಧುನಿಕ ಭಾರತದ ಪಿತಾಮಹ
ಭಾರತೀಯರು ದೇಶ ಮುನ್ನಡೆಸಲು ಲಾಯಕ್ಕಿಲ್ಲ ಎಂದು ಬ್ರಿಟೀಷರು ಹೇಳಿದಾಗ, ಲೋಕಮಾನ್ಯ ತಿಲಕ್ ಅವರು ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು, ಅದನ್ನು ಪಡೆದೇ ತೀರುತ್ತೇನೆ ಎಂದಿದ್ದರು. ಮಹಾತ್ಮ ಗಾಂಧಿ ಅವರೇ ತಿಲಕರನ್ನು ಆಧುನಿಕ ಭಾರತದ ಪಿತಾಮಹ ಅಂತ ಕರೆದಿದ್ದರು ಎಂದು ಸ್ಮರಿಸಿದ್ದಾರೆ.
ಈ ಕಾರ್ಯಕ್ರಮದ ವಿಶೇಷವೆಂದರೆ, ಎನ್ಸಿಪಿ(NCP) ಮುಖ್ಯಸ್ಥ ಮತ್ತು ವಿರೋಧ ಪಕ್ಷದ ಹಿರಿಯ ನಾಯಕ ಶರದ್ ಪವಾರ್ ಕೂಡ ಪ್ರಧಾನಿ ಮೋದಿ ಅವರೊಂದಿಗೆ ವೇದಿಕೆಯನ್ನು ಹಂಚಿಕೊಂಡಿದ್ದಾರೆ.