Tuesday, November 5, 2024

ಡಯಾಲಿಸಿಸ್ ರೋಗಿಗಳೇ ಎಚ್ಚರ: ನಾಳೆಯಿಂದ ಡಯಾಲಿಸೀಸ್ ಸೇವೆ ಬಂದ್​!

ಬೆಂಗಳೂರು: ವೇತನ ಸಮಸ್ಯೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಾಳೆ(ಆಗಸ್ಟ್​. 2) ರಿಂದ ರಾಜ್ಯಾದ್ಯಂತ ಡಯಾಲಿಸಿಸ್​ ಸೇವೆ ಬಂದ್​ ಮಾಡಲು ರಾಜ್ಯ ಡಯಾಲಿಸೀಸ್​ ಸಂಘ ತೀರ್ಮಾನಿಸಿದೆ.

ಇದನ್ನೂ ಓದಿ: ಇತಿಹಾಸ ಪ್ರಸಿದ್ದ ದೇವಾಲಯ ಕೆಡವಿದ ಬಿಬಿಎಂಪಿ ಅಧಿಕಾರಿಗಳು: ತೀವ್ರ ಆಕ್ರೋಶ

ರಾಜ್ಯಾದ್ಯಂತ 12೦ಕ್ಕೂ ಹೆಚ್ಚು ಡಯಾಲಿಸಿಸ್ ವಿಭಾಗಗಳಲ್ಲಿ 1 ಸಾವಿರಕ್ಕು ಅಧಿಕ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಈ  ಸಿಬ್ಬಂಧಿಗಳಿಂದ ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ಅನಿರ್ಧಿಷ್ಟವಾಧಿ ಪ್ರತಿಭಟನೆ‌ ನಡೆಸಲು ತಿರ್ಮಾನಿಸಿದೆ.

ಕಳೆದ ವರ್ಷ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ವಿವಿಧೆಡೆ ಡಯಾಲಿಸೀಸ್​ ಸೆಂಟರ್​ಗಳ ಉದ್ಯೋಗಿಗಳು ಪ್ರತಿಭಟನೆ ನಡೆಸಿದ್ದರು. ಈ ವೇಳೆ, ಅಂದಿನ ಬಿಜೆಪಿ ಸರ್ಕಾರ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿತ್ತು, ಆದರೇ ಯಾವುದೇ ಬೇಡಿಕೆಗಳು ಈಡೇರಲಿಲ್ಲ. ಇದೇ ಕಾರಣಕ್ಕೆ ಮತ್ತೆ ರಾಜ್ಯಾದ್ಯಂತ ಡಯಾಲಿಸೀಸ್​​ ಸೇವೆ ಸ್ಥಗಿತಗೊಳಿಸಿ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ.

ಸದ್ಯ ನಾಳೆಯಿಂದ ಶುರುವಾಗಲಿರುವ ಡಯಾಲಿಸಿಸ್ ಸೇವೆ ಬಂದ್‌ ನಿಂದಾಗಿ ಡಯಾಲಿಸಿಸ್ ರೋಗಿಗಳಿಗೆ ಆತಂಕ ಶುರುವಾಗಿ.

RELATED ARTICLES

Related Articles

TRENDING ARTICLES