ರಾಮನಗರ : ಇಂದಿನಿಂದ ಬೆಂಗಳೂರು – ಮೈಸೂರು ಎಕ್ಸ್ ಪ್ರೆಸ್ ಹೈವೆಯಲ್ಲಿ ದ್ವಿಚಕ್ರ, ತ್ರಿ ಚಕ್ರ ವಾಹನಗಳ ಓಡಾಟಕ್ಕೆ ನಿರ್ಬಂಧ ವಿಧಿಸಿಲಾಗಿದೆ.
ಇದನ್ನೂ ಓದಿ:SC.SP/ TSP ಅಡಿ 34,293.69 ಕೋಟಿ ಕ್ರಿಯಾ ಯೋಜನೆ ಅನುಮೋದನೆ!
ಇತ್ತೀಚೆಗೆ ಎಕ್ಸ್ಪ್ರೆಸ್ ವೇ ನಲ್ಲಿ ಅಪಘಾತ ಪ್ರಕರಣಗಳು ಹೆಚ್ಚಾಗಿ ಕೇಳಿಬರುತ್ತಿರುವ ಹಿನ್ನೆಲೆ, ಅಪಘಾತಗಳ ತಡೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕ್ರಮಕ್ಕೆ ಮುಂದಾಗಿದ್ದು ದ್ವಿಚಕ್ರ, ತ್ರಿಚಕ್ರ ವಾಹನ ಸೇರಿ ಕೆಲ ವಾಹನಗಳಿಗೆ ನಿಷೇಧ ಹೇರಿದೆ.
ರಾಷ್ಟ್ರೀಯ ಹೆದ್ದಾರಿ ನಿಯಂತ್ರಣ ಕಾಯ್ದೆ 2002ರ ಅನ್ವಯ ಇಂದು ಬೆಳಗ್ಗೆ 8 ಗಂಟೆಯಿಂದಲೇ ಎಕ್ಸ್ಪ್ರೆಸ್ ವೇ ಒಳಗೆ ಬೈಕ್, ಆಟೋ, ಮೋಟಾರ್ ಅಲ್ಲದ ವಾಹನಗಳು, ಟ್ರ್ಯಾಕ್ಟರ್, ಮಲ್ಟಿ ಆಕ್ಸೆಲ್ ಹೈಡ್ರಾಲಿಕ್ ವಾಹನಗಳು, ಕ್ವಾಡ್ರಿ ಸೈಕಲ್ ವಾಹನಗಳ ಓಡಾಟಕ್ಕೂ ಓಡಾಡುವಂತಿಲ್ಲ.
ನಿಯಮ ಮೀರಿ ಪ್ರವೇಶಕ್ಕೆ ದಂಡ:
ಇನ್ನೂ ಹೆದ್ದಾರಿ ಪ್ರಾಧಿಕಾರದ ನಿಷೇಧದ ನಡುವೆಯೂ ಎಕ್ಸ್ ಪ್ರೆಸ್ ಹೈವೆ ಒಳಗೆ ನಿಷೇಧಿತ ವಾಹನಗಳು ಪ್ರವೇಶಿಸಿದರೇ ದಂಡ ಬೀಳಲಿದ್ದು, ನಿಷೇಧಿತ ವಾಹನಗಳಿಗೆ 500ರೂ ದಂಡ ವಿಧಿಸುವುದು ಎಂದು ರಾಮನಗರ ಜಿಲ್ಲಾ ಎಸ್ಪಿ ಎಚ್ಚರಿಕೆ ನೀಡಿದ್ದಾರೆ. ಇನ್ನೂ ಎಕ್ಸ್ಪ್ರೆಸ್ ವೇ ಸುತ್ತ ರಾಮನಗರದ 9 ಎಂಟ್ರಿ & ಎಕ್ಸಿಟ್ ಗಳಲ್ಲಿ ರಾಮನಗರ ಪೊಲೀಸರು ತಪಾಸಣೆ ನಡೆಸಲಿದ್ದಾರೆ.