ಬೆಂಗಳೂರು : ನಿತ್ಯ ಬಳಕೆ ಅಗತ್ಯ ವಸ್ತುಗಳ ದರ ಹೆಚ್ಚಳ ಮತ್ತು ಸೇವಾ ವಲಯದ ಶುಲ್ಕ ಹೆಚ್ಚುವ ಎಲ್ಲ ಸಾಧ್ಯತೆಗಳಿದ್ದು, ಕುಟುಂಬ ನಿರ್ವಹಣೆಗೆ ತಿಂಗಳ ವರಮಾನ ಸಾಲದೇ ಸಂಬಳ ಹೆಚ್ಚಿಸಲು ಕಾರ್ಮಿಕರು ಒತ್ತಾಯದ ಕೂಗು ಕೇಳಿ ಬಂದಿದೆ.
ಇದನ್ನೂ ಓದಿ: ಪಾಕಿಸ್ತಾನದಲ್ಲಿ ಬಾಂಬ್ ಸ್ಪೋಟ : 39 ಸಾವು
ತರಕಾರಿ, ಬೇಳೆಕಾಳು, ವಿದ್ಯುತ್ ದರಗಳು ಗಗನಕ್ಕೇರಿದ್ದು ಜನ ಸಾಮಾನ್ಯರ ದೈನಂದಿನ ಜೀವನದ ಮೇಲೆ ಪರಿಣಾಮ ಬೀರಲಾರಂಭಿಸಿದೆ. ಸರಕುಗಳ ಚಿಲ್ಲರೆ ಮಾರುಕಟ್ಟೆ, ಅಂಗಡಿ ಮುಂಗಟ್ಟುಗಳಲ್ಲಿ ಲಭ್ಯವಾಗುವ ದಿನಬಳಕೆ ಪರಿಕರಗಳು (ಎಫ್‌ಎಂಜಿಸಿ) ಬೆಲೆ ಹೆಚ್ಚಾಗುವ ಲಕ್ಷಣವಿದೆ.
ಜೊತೆಗೆ ಕಾರ್ಮಿಕ ವಲಯದ ವಿವಿಧ ಸೇವೆಗಳು ಕೂಡ ದುಬಾರಿಯಾಗುವ ಎಲ್ಲ ಲಕ್ಷಣಗಳು ಕಂಡುಬರುತ್ತಿದೆ. ಅಸಂಘಟಿತ ವಲಯದ ಎಲೆಕ್ಷಿಷಿಯನ್ ಗಳು, ಕಟ್ಟಡ ಕಾರ್ಮಿಕರು, ಮನೆ ಸ್ವಚ್ಚಗೊಳಿಸುವ ಕಾರ್ಮಿಕರು ಸಂಬಳ ಹೆಚ್ಚಳಕ್ಕೆ ಬೇಡಿಕೆ ಇಡುತ್ತಿದ್ದಾರೆ.
ದಿನಕ್ಕೆ 500-600 ರವರೆಗಿದ್ದ ಸಾಮಾನ್ಯ ಕೆಲಸಗಳ ದಿನದ ಸಂಬಳ ಇದೀಗ 700-800 ರವರೆಗೆ ತಲುಪುವ ಸಾಧ್ಯತೆ ಇದೆ. ಹೌಸ್ ಕೀಪಿಂಗ್‌ನ ವಿವಿಧ ಸರ್ವಿಸ್‌ಗಳು ಶೇಕಡ 10ರಿಂದ 15ರವರೆಗೆ ಹೆಚ್ಚುವ ಸಾಧ್ಯತೆಯಿದೆ ಎಂದು ಸರ್ವೀಸ್ ವಲಯದ ಸಂಸ್ಥೆ ಚಿಂತನೆ ನಡೆಸಿದೆ.