Sunday, December 22, 2024

Good News : ಇನ್ಮುಂದೆ ಕಾವೇರಿ ನೀರಿನ ಸಮಸ್ಯೆ ಇಲ್ಲ

ಬೆಂಗಳೂರು : ರಾಜ್ಯ ರಾಜಧಾನಿ ಜನರಿಗೆ ಇನ್ಮುಂದೆ ಕಾವೇರಿ ನೀರಿನ ಸಮಸ್ಯೆ ಇರುವುದಿಲ್ಲ. ಜಲಮಂಡಳಿಗೆ ಇಷ್ಟು ದಿನ ಇದ್ದ ಸಮಸ್ಯೆ ಈಗ ಇರುವುದಿಲ್ಲ.

ಕೆಆರ್​ಎಸ್(KRS)ನಿಂದ ನೀರು ಪೂರೈಕೆ ಹಿನ್ನೆಲೆ ಬೆಂಗಳೂರಿಗೆ ಕಾವೇರಿ ನೀರಿನ ಸಮಸ್ಯೆಗೆ ಪರಿಹಾರ ಸಿಗಲಿದೆ. ಜೂನ್​​​ನಲ್ಲಿ ಮಳೆಯಾಗದ ಕಾರಣ ಕೆಆರ್​ಎಸ್(KRS)ನಲ್ಲಿ ನೀರಿನ ಮಟ್ಟ ಕುಸಿತ ಹಿನ್ನೆಲೆ ರಾಜಧಾನಿ  ಜನರಿಗೆ ಕಾವೇರಿ ನೀರಿನ ಸಮಸ್ಯೆ ಎದುರಾಗಿತ್ತು.

ಕಳೆದ ಎರಡು ವಾರಗಳಿಂದ ಉತ್ತಮ ಮಳೆ ಹಿನ್ನೆಲೆ KRSನಲ್ಲಿ ಉತ್ತಮ ನೀರು ಶೇಖರಣೆಯಾಗಿದೆ. ಬೆಂಗಳೂರಿಗೆ ಕೆಆರ್​ಎಸ್(KRS)ನೀರು ಪೂರೈಕೆ ಆಗುತ್ತಿದ್ದು, ಒಟ್ಟು ಬೆಂಗಳೂರಿಗೆ ಒಂದೂವರೆ ಟಿಎಂಸಿ ನೀರು ಅಗತ್ಯವಿದೆ. ರಾಜಧಾನಿ ಜನತೆಗೆ ಇನ್ಮುಂದೆ ಕಾವೇರಿ ನೀರಿನ ಸಮಸ್ಯೆ ಇಲ್ಲ ಎಂದು ಡಿಬ್ಲ್ಯೂಎಸ್​ಎಸ್​ಬಿ (BWSSB) ತಿಳಿಸಿದೆ.

RELATED ARTICLES

Related Articles

TRENDING ARTICLES