Wednesday, January 22, 2025

ಬೆಂಗಳೂರಿನಲ್ಲಿ ನಿಲ್ಲದ ನಕಲಿ ನೋಟ್ ದಂಧೆ!ಆರೋಪಿಗಳ ಬಂಧನ

ಬೆಂಗಳೂರು: ಬಿಹಾರದಿಂದ ನಕಲಿ ನೋಟ್ ತಂದು ಬೆಂಗಳೂರಿನಲ್ಲಿ ಮಾರಟ ಮಾಡುತಿದ್ದ ಆರೋಪಿಗಳನ್ನು ಕಾಟನ್​ ಪೇಟೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದರೆ.

ಇದನ್ನೂ ಓದಿ: ಗೃಹಲಕ್ಷ್ಮಿ ಜಾರಿ: ಆತಂಕ ವ್ಯಕ್ತಪಡಿಸಿದ ಹಣಕಾಸು ಇಲಾಖೆ! ಷರತ್ತುಗಳನ್ನು ವಿಧಿಸುವಂತೆ ಸೂಚನೆ!

ಬಿಹಾರ ಮೂಲದ ಶರವಣ  ಬಂಧಿತ ಆರೋಪಿ, ಎಲ್ಲಾ ವ್ಯವಹಾರವನ್ನೂ ಇನ್​​ಸ್ಟಾಗ್ರಾಮ್ ಮೂಲಕವೇ ವ್ಯವಹರಿಸುತಿದ್ದ ಆರೋಪಿ, ಬಿಹಾರದ ಮೂಲಕ ನಕಲಿ ನೋಟು ತರುತಿದ್ದ. ಈತ ಬಿಹಾರಕ್ಕೆ ತೆರಳಿ 10 ಲಕ್ಷ ನಕಲಿ ನೋಟಿಗೆ 3ಲಕ್ಷ ರೂ. ಅಸಲಿ ನೋಟು ನೀಡಿ ತಂದು ಬಳಿಕ, ಬೆಂಗಳೂರಿನಲ್ಲಿ 4 ಲಕ್ಷ ರೂ. ಅಸಲಿ ನೋಟಿಗೆ 10 ಲಕ್ಷ ರೂ. ನಕಲಿ ನೋಟು ನೀಡುತಿದ್ದ.

ಸದ್ಯ ಈತನಿಂದ ನಕಲಿ ನೋಟು ಪಡೆದ ಮತ್ತಿಬ್ಬರು ಕೇರಳ ಮೂಲದ ಆರೋಪಿಗಳನ್ನು ಕಾಟನ್ ಪೇಟೆ ಪೊಲೀಸರು ಬಂಧನ ಮಾಡಿದ್ದಾರೆ. ಬಂಧಿತರಿಂದ 6 ಲಕ್ಷಕ್ಕೂ ಅಧಿಕ ನಕಲಿ ನೋಟ್ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

RELATED ARTICLES

Related Articles

TRENDING ARTICLES