Monday, December 23, 2024

ನಾಳೆಯಿಂದ ಹಾಲಿನ ದರ ದುಬಾರಿ: ಬಾಯಿ ಸುಡುತ್ತೆ ಕಾಫಿ, ಟೀ!

ಬೆಂಗಳೂರು : ನಾಳೆಯಿಂದ ಗ್ರಾಹಕರ ಜೇಬಿಗೆ ಮತ್ತಷ್ಟು ಹೊರೆ ಬೀಳಲಿದ್ದು ನಂದಿನಿ ಹಾಲಿನ ದರ ಪ್ರತಿ ಲೀಟರ್​ ಗೆ 3 ರೂಗಳ ಹೆಚ್ಚಳ ಮಾಡಲು ಸರ್ಕಾರ ತೀರ್ಮಾನಿಸಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ನಿಲ್ಲದ ನಕಲಿ ನೋಟ್ ದಂಧೆ!ಆರೋಪಿಗಳ ಬಂಧನ

ಈಗಾಗಲೇ ಬೆಲೆ ಏರಿಕೆಯಿಂದ ಕಂಗಾಲಾದ ಜನರಿಗೆ ನಂದಿನಿ ಹಾಲು ಮತ್ತಷ್ಟು ದುಬಾರಿಯಾಗಿದ್ದು ನಾಳೆಯಿಂದಲೇ ಪರಿಷ್ಕೃತ ದರ ಜಾರಿಯಾಗಲಿದೆ 1 ಲೀಟರ್ ಹಾಲಿನ ದರ 3 ರೂಪಾಯಿ ಹೆಚ್ಚಳ, ಪ್ರತಿ ಲೀಟರ್‌ ಹಾಲು 42 ರೂಪಾಯಿ ಆಗಲಿದೆ.

ಬೆಲೆ ಏರಿಕೆ ಕುರಿತು ಜುಲೈ 22 ರಂದು ನಡೆದ ಕೆಎಂಎಫ್ ಮತ್ತು ಸಿಎಂ ಸಭೆಯಲ್ಲಿ ಪ್ರತಿ ಲೀಟರ್​ ಹಾಲಿನ ದರ 5 ರೂ. ಹೆಚ್ಚಳ ಮಾಡುವಂತೆ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿತ್ತು, ಇದಕ್ಕೊಪ್ಪದ  ಸಿಎಂ ಸಿದ್ದರಾಮಯ್ಯ 3 ರೂಪಾಯಿ ಹೆಚ್ಚಳಕ್ಕೆ ಮಾತ್ರ ಅನುಮತಿ ನೀಡಿದ್ದರು,

ಕಾಫಿ, ಟಿ ದುಬಾರಿ?

ಹಾಲಿನ ಬೆಲೆ ಏರಿಕೆ ಬೆನ್ನಲ್ಲೇ ಇದೀಗ ಹೊಟೆಲ್​ ಗಳಲ್ಲಿ ಟಿ,ಕಾಫಿ ದರ ಹೆಚ್ಚಳಕ್ಕೆ ಹೋಟೆಲ್​ ಮಾಲೀಕರ ಸಂಘ ಶೇ.10ರಷ್ಟು ಬೆಲೆ ಏರಿಕೆಗೆ ತೀರ್ಮಾನಿಸಿದೆ, ನಾಳೆಯಿಂದಲೇ ಈ ಹೊಸ ದರ ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನಲಾಗಿತ್ತಿದೆ.

RELATED ARTICLES

Related Articles

TRENDING ARTICLES