Sunday, December 22, 2024

ಗೃಹಲಕ್ಷ್ಮಿ ಜಾರಿ: ಆತಂಕ ವ್ಯಕ್ತಪಡಿಸಿದ ಹಣಕಾಸು ಇಲಾಖೆ! ಷರತ್ತುಗಳನ್ನು ವಿಧಿಸುವಂತೆ ಸೂಚನೆ!

ಬೆಂಗಳೂರು : ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆ ಜಾರಿ ಕುರಿತು ಆರ್ಥಿಕ ಇಲಾಖೆಯಿಂದ ಆತಂಕ ವ್ಯಕ್ತವಾಗಿದ್ದು, ಹಣಕಾಸು ಇಲಾಖೆ ಸರ್ಕಾರಕ್ಕೆ ತನ್ನದೆಯಾದ ಅಭಿಪ್ರಾಯಗಳನ್ನು ನೀಡಿದೆ.

ಇದನ್ನೂ ಓದಿ: ಅಧಿಕಾರಿಗಳ ಸಹಿ ನಕಲು: ಬಿಎಂಟಿಸಿ 6 ಅಧಿಕಾರಿಗಳ ವಿರುದ್ಧ FIR ದಾಖಲು!

ಶಕ್ತಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಪ್ರತಿ ವರ್ಷ 31 ಸಾವಿರ ಕೋಟಿ ಅವಶ್ಯಕತೆ ಇದೆ, ಮುಂಬರುವ 5 ವರ್ಷಗಳ ಪೂರ್ಣಾವಧಿಗೆ ಗೃಹಲಕ್ಷ್ಮಿ ಯೋಜನೆಗೆ ಹಣಕಾಸು ಪೂರೈಸಲು ಸಾಧ್ಯವಿಲ್ಲ ಎಂದು ಹಣಕಾಸು ಇಲಾಖೆ ತನ್ನದೇ ಆದ ಅಭಿಪ್ರಾಯವನ್ನು ತಿಳಿಸಿದೆ.

ಜಾರಿಯಾಗಲಿರುವ ಗೃಹಲಕ್ಷ್ಮಿ ಯೋಜನೆಗೆ ಷರತ್ತುಗಳನ್ನು (ಕಂಡಿಷನ್) ಹಾಕದಿದ್ದರೇ ಪ್ರತಿ ವರ್ಷವೂ ಗೃಹಲಕ್ಷ್ಮಿ ಯೋಜನೆ ಜಾರಿ ಮಾಡುವುದು ಅಸಾಧ್ಯ ಎಂದು ಹಣಕಾಸು ಇಲಾಖೆ ಸರ್ಕಾರಕ್ಕೆ ಸ್ಪಷ್ಟವಾಗಿ ತಿಳಿಸಿದೆ.

ಗೃಹಲಕ್ಷ್ಮಿ ಯೋಜನೆ ಜಾರಿಗೂ ಮುನ್ನ ಸರ್ಕಾರಕ್ಕೆ ಅನೇಕ‌‌ ಷರತ್ತುಗಳನ್ನು ಆರ್ಥಿಕ ಇಲಾಖೆ ಹಾಕಿದ್ದರು ಷರತ್ತುಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿದೆ. ಇನ್ನು ಮುಂಬರುವ ದಿನಗಳಲ್ಲಿ ಕೇವಲ ಬಿಪಿಎಲ್ ಕಾರ್ಡ್ ದಾರರಿಗೆ ಮಾತ್ರ ಗೃಹಲಕ್ಷ್ಮೀ‌ ಯೋಜನೆ ಸೌಲಭ್ಯ ನೀಡಲು ಹಣಕಾಸು ಇಲಾಖೆ ಸೂಚನೆ ನೀಡಿದ್ದು

ಹಣಕಾಸು ಇಲಾಖೆ ಸರ್ಕಾರಕ್ಕೆ ಹಾಕಿದ್ದ ಕಂಡೀಷನ್ ಗಳು ಏನ್ ಗೊತ್ತಾ..?

  • ಇನ್‌ ಕಮ್ ಟ್ಯಾಕ್ಸ್ ಪಾವತಿದಾರರಿಗೆ ಕೊಡಬಾರದು.
  • GST ರಿಟರ್ನ್ಸ್ ಪಾವತಿಸುವ ಮಹಿಳೆಯರಿಗೆ ನೀಡಬಾರದು.
  • ಪ್ರೊಫೆಷನಲ್ ಟ್ಯಾಕ್ಸ್ ಪಾವತಿದಾರರಿಗೆ‌ ಕೊಡಬಾರದು.
  • 5 ಎಕರೆಗೂ ಮೀರಿದ ಒಣಭೂಮಿ ಹೊಂದಿರುವವರಿಗೆ ಕೊಡುವಂತಿಲ್ಲ.
  • ಒಂದು ವರ್ಷಕ್ಕೆ2 ಲಕ್ಷ ಆದಾಯ ಇರುವವರಿಗೆ ಕೊಡಲಾಗದು.
  • ನಾಲ್ಕು ಚಕ್ರಗಳ ವಾಹನ ಹೊಂದಿದವರಿಗೂ‌‌ ಕೊಡಬಾರದು.
  • ಸರ್ಕಾರಿ‌ ಉದ್ಯೋಗಿಗಳು & ಪೆನ್ಶ್ಯನ್ ಪಡೆಯುವರಿಗೆ ಅನ್ವಯಿಸಲ್ಲ.
  • ಅಂಗನವಾಡಿ ಕಾರ್ಯಕರ್ತೆಯರು, ಆಶಾ, ಸರ್ಕಾರದ ಗುತ್ತಿಗೆ ನೌಕರರು, ಅತಿಥಿ ಶಿಕ್ಷಕರು, ಗ್ರಾಮ ಸಹಾಯಕರಿಗೆ‌ ಕೊಡಬಾರದು.

ಹೀಗೆ ಹಣಕಾಸು ಇಲಾಖೆ ತನ್ನದೇ ಆದ ಅಭಿಪ್ರಾಯಗಳನ್ನು, ಸಾಲು ಸಾಲು ಷರತ್ತುಗಳನ್ನು ವಿಧಿಸಿ ಸರ್ಕಾರಕ್ಕೆ ಸೂಚಿಸಿದೆ.

RELATED ARTICLES

Related Articles

TRENDING ARTICLES