Monday, December 23, 2024

ಗೃಹಜ್ಯೋತಿ: ಉಚಿತ ವಿದ್ಯುತ್​ ಆಗಸ್ಟ್​ 5 ಕ್ಕೆ ಉದ್ಘಾಟನೆ

ಬೆಂಗಳೂರು: ಕಾಗ್ರೆಸ್​ ಸರ್ಕಾರದ ಶಕ್ತಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಆಗಸ್ಟ್​ ಐದರಿಂದ ಉಚಿತ ವಿದ್ಯುತ್​ ಯೋಜನೆಗೆ ಉದ್ಘಾಟನೆಯಾಗಲಿದೆ.

ಇದನ್ನೂ ಓದಿ: ಅಗತ್ಯ ವಸ್ತುಗಳ ಬೆಲೆ ಏರಿಕೆ: ಕಾರ್ಮಿಕರಿಂದ ಸಂಬಳ ಹೆಚ್ಚಳಕ್ಕೆ ಒತ್ತಾಯ!

AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಉಚಿತ ವಿದ್ಯುತ್ ಯೋಜನೆಯನ್ನು ಆಗಸ್ಟ್​ 5 ರಂದು ಅಧಿಕೃತವಾಗಿ ಉದ್ಘಾಟನೆ ಮಾಡಲಿದ್ದಾರೆ, ಈ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ , ಡಿಸಿಎಂ ಡಿ.ಕೆ ಶಿವಕುಮಾರ್, ಸಚಿವ ಕೆ.ಜೆ ಜಾರ್ಜ್​ ಭಾಗಿಯಾಗಲಿದ್ದಾರೆ.

ರಾಜ್ಯಾದ್ಯಂತ ಇರುವ 2.16 ಕೋಟಿ ಮನೆಗಳು ವಿದ್ಯುತ್ ಸಂಪರ್ಕಗಳನ್ನು ಹೊಂದಿದ್ದು, ಈ ಪೈಕಿ ರಾಜ್ಯ ಸರ್ಕಾರದ ಗೃಹಜ್ಯೋತಿ ಯೋಜನೆಗೆ 1.40 ಕೋಟಿ ಜನರಿಂದ ನೋಂದಣಿ ಮಾಡಿಸಿಕೊಂಡಿದ್ದಾರೆ. ಈ ಯೋಜನೆಗೆ ಜುಲೈ 27 ರ ಒಳಗೆ ನೊಂದಾಯಿಸಿಕೊಂಡವರಿಗೆ ಜುಲೈ ತಿಂಗಳಲ್ಲಿ ಬಳಸಿದ ವಿದ್ಯುತ್ ಗೆ ಯಾವುದೇಶುಲ್ಕ ಕಟ್ಟುವ ಹಾಗಿಲ್ಲ.

RELATED ARTICLES

Related Articles

TRENDING ARTICLES