Wednesday, April 2, 2025

ಚಲಿಸುತ್ತಿದ್ದ ರೈಲಿನಲ್ಲಿ RPF ಪೇದೆಯಿಂದ ಗುಂಡಿನ ದಾಳಿ: 4 ಬಲಿ

ಮುಂಬೈಆರ್‌ಪಿಎಫ್‌ ಸಿಬ್ಬಂದಿಯ ಗುಂಡಿನ ದಾಳಿಗೆ ನಾಲ್ವರು ಬಲಿಯಾಗಿರುವ ಘಟನೆ ಮಹಾರಾಷ್ಟ್ರದ ಫಾಲ್ಘರ್‌ ರೈಲು ನಿಲ್ದಾಣದ ಬಳಿ ಸಂಭವಿಸಿದೆ. ಘಟನೆಯಲ್ಲಿ ಆರ್‌ಪಿಎಫ್‌ನ ಸಹಾಯಕ ಸಬ್‌ ಇನ್ಸ್‌ಪೆಕ್ಟರ್‌ ಸಾವನ್ನಪ್ಪಿದ್ದಾರೆ. ಗುಂಡಿನ ದಾಳಿ ನಡೆಸಿದ ಆರ್‌ಪಿಎಫ್‌ ಸಿಬ್ಬಂದಿಯನ್ನು ರೈಲ್ವೇ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಗೃಹಜ್ಯೋತಿ: ಉಚಿತ ವಿದ್ಯುತ್​ ಆಗಸ್ಟ್​ 5 ಕ್ಕೆ ಉದ್ಘಾಟನೆ 

ಆರೋಪಿಯನ್ನು ಆರ್‌ಪಿಎಫ್‌ ಕಾನ್ಸ್‌ಟೇಬಲ್‌ ಚೇತನ್‌ ಸಿಂಗ್‌ ಎಂದು ಗುರುತಿಸಲಾಗಿದ್ದು ಸೋಮವಾರ ಬೆಳಗ್ಗೆ ಐದು ಗಂಟೆ ಸುಮಾರಿಗೆ ಜೈಪುರದಿಂದ ಮುಂಬೈಗೆ ತೆರಳುತ್ತಿದ್ದ ಜೈಪುರ ಎಕ್ಸ್‌ಪ್ರೆಸ್‌ (12956) ರೈಲಿನಲ್ಲಿ ಗುಂಡಿನ ದಾಳಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುಂಡಿನ ದಾಳಿ ನಡೆಸಿದ ಆರೋಪಿಯನ್ನು ಗನ್​ ಸಮೇತ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತದೇಹಗಳನ್ನು ಬೋರಿವೆಲಿ ನಿಲ್ದಾಣದ ಬಳಿ ರೈಲಿನಿಂದ ಹೊರತೆಗೆಯಲಾಗಿದೆ. ಕಾನ್‌ಸ್ಟೇಬಲ್‌ ಚೇತನ್‌ ಮೊದಲು ಪ್ರಯಾಣಿಕರ ತಲೆಗೆ ಗನ್‌ ಇಟ್ಟಿದ್ದ ಬಳಿಕ ಎಎಸ್‌ಐ ಟೀಕಾ ರಾಮ್‌ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ ಎಂದು ಪಶ್ಚಿಮ ರೈಲ್ವೇ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

RELATED ARTICLES

Related Articles

TRENDING ARTICLES