Thursday, January 23, 2025

7 ವಿದೇಶಿ ಉಪಗ್ರಹಗಳ ಯಶಸ್ವಿ ಉಡಾವಣೆ!

ಶ್ರೀಹರಿಕೋಟಾ: ಚಂದ್ರಯಾನ 3 ಬಳಿಕ 7 ವಿದೇಶಿ ಉಪಗ್ರಹಗಳನ್ನು ಹೊತ್ತು ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಪಿಎಸ್​ಎಲ್​ವಿ-ಸಿ56 ರಾಕೆಟ್ ಇಂದು ಯಶಸ್ವಿಯಾಗಿ ಉಡಾವಣೆಯಾಗಿದೆ.

ಇದನ್ನೂ ಓದಿ: ಕಾಂಗ್ರೆಸ್​ ಸೇರಲು ತೆರೆಮರೆಯ ಕಸರತ್ತು ನಡೆಸುತ್ತಿರುವ ಬಾಂಬೆ ಬಾಯ್ಸ್!

ಇತ್ತೀಚೆಗೆ ಚಂದ್ರಯಾನ-3 ಉಡಾವಣೆಯಾದ ಬೆನ್ನಲ್ಲೇ ಇದೀಗ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ISRO ಇಂದು ಮತ್ತೊಂದು ರಾಕೆಟ್​ ಉಡಾವಣೆ ಮಾಡಿದ್ದು, ಸಿಂಗಾಪೂರದ ಉಪಗ್ರಹಗಳನ್ನು ಹೊತ್ತ ಪಿಎಸ್​ಎಲ್​ವಿ-ಸಿ56 ರಾಕೆಟ್​ ಅನ್ನು​ ಇಂದು ಬೆಳಗ್ಗೆ 6.30ಕ್ಕೆ ಆಂಧ್ರ ಪ್ರದೇಶದದ ಶ್ರೀಹರಿಕೋಟಾದಲ್ಲಿರುವ ಸತೀಶ್​ ಧವನ್​ ಬಾಹ್ಯಾಕಾಶ ಕೇಂದ್ರ ದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.

ಉಡಾವಣೆಯಾಗಿದ್ದು ರಾಕೆಟ್ ಎಲ್ಲ ಉಪಗ್ರಹಗಳನ್ನು ಕಕ್ಷೆಗೆ ಯಶಸ್ವಿಯಾಗಿ ಸೇರಿಸಿದೆ. ಎಲ್ಲಾ ಉಪಗ್ರಹಗಳನ್ನು 5 ಕಕ್ಷೆಯ ಇಳಿಜಾರಿನೊಂದಿಗೆ 535 ಕಿಮೀ ವೃತ್ತಾಕಾರಕ್ಕೆ ಸೇರಿಸಲಾಗುತ್ತದೆ ಎಂದು ಇಸ್ರೋ ಹೇಳಿಕೊಂಡಿದೆ.

RELATED ARTICLES

Related Articles

TRENDING ARTICLES