Wednesday, January 22, 2025

ರಾಹುಲ್‌ಗೆ ಸೂಕ್ತ ಹೆಣ್ಣು ಹುಡುಕಿ : ಸೋನಿಯಾ ಗಾಂಧಿ!

ನವದೆಹಲಿ : ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಇತ್ತೀಚೆಗೆ ಯಾವುದೇ ಸಂವಾದದಲ್ಲಿ ಪಾಲ್ಗೊಳ್ಳಲು ಹೋದಾಗ ಅವರಿಗೆ ಎದುರಾಗುವ ಕಾಯಂ ಪ್ರಶ್ನೆ ನಿಮ್ಮ ಮದುವೆ ಯಾವಾಗ?, ಈಗ ಇದೇ ಪ್ರಶ್ನೆಯನ್ನು ಹರಿಯಾಣದ ಮಹಿಳೆಯರೂ ಕೇಳಿದ್ದಾರೆ. ಆದರೆ ರಾಹುಲ್ ಗಾಂಧಿಗೆ ಅಲ್ಲ. ನಿಮ್ಮ ಮಗ ರಾಹುಲ್ ಮದುವೆ ಯಾವಾಗ ಎಂದು ಅವರ ತಾಯಿ ಸೋನಿಯಾ ಗಾಂಧಿಯನ್ನು ಕೇಳಿದ್ದಾರೆ. ನೀವೇ ಯಾಕೆ ಒಂದು ಸೂಕ್ತ ಹೆಣ್ಣನ್ನು ನೋಡಬಾರದು?’ ಎಂದು ಮಹಿಳೆಯರಿಗೆ ಸೋನಿಯಾ ಮರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ನಟ ಸುದೀಪ್​

ಇತ್ತೀಚೆಗೆ ದೆಹಲಿಯಲ್ಲಿ ಸೋನಿಯಾರನ್ನು ಭೇಟಿಯಾದ ಮಹಿಳೆಯರ ತಂಡ, ರಾಹುಲ್ ಇನ್ನೂ ಯಾಕೆ ಮದುವೆಯಾಗಿಲ್ಲ? ಪ್ರಶ್ನಿಸಿತ್ತು. ಆಗ ನೀವೇ ಹೆಣ್ಣು ನೋಡಿ ಎಂದು ತಮಾಷೆಯಾಗಿ ಹೇಳಿದ್ದರು. ಇದರ ಹಿಂದಿನ ಕತೆ ಏನು ಎಂದರೆ ಜುಲೈ 8ರಂದು ಹರಿಯಾಣದ ಸೋನಿಪತ್ ಜಿಲ್ಲೆಯ ಮದೀನಾ ಗ್ರಾಮಕ್ಕೆ ಭೇಟಿ ನೀಡಿದ್ದ ರಾಹುಲ್ ಗಾಂಧಿ, ತಮ್ಮ ಮನೆಯಲ್ಲಿ ಭೋಜನದ ವ್ಯವಸ್ಥೆ ಮಾಡುತ್ತೇನೆ. ಬನ್ನಿ ಎಂದು ಅಲ್ಲಿನ ರೈತ ಮಹಿಳೆಯರ ತಂಡಕ್ಕೆ ಆಹ್ವಾನ ನೀಡಿದ್ದರು.

ಈ ತಂಡ ಆತಿಥ್ಯ ಸ್ವೀಕರಿಸಲು ದೆಹಲಿಗೆ ಬಂದಿದ್ದಾಗ ಸೋನಿಯಾ ಬಳಿ ರಾಹುಲ್ ಮದುವೆ ವಿಷಯ ಪ್ರಸ್ತಾಪ ಮಾಡಿದ್ದರು. ಈ ಮಹಿಳೆಯರ ಭೇಟಿಯ ವಿಡಿಯೋವನನ್ನು ಸಾಮಾಜಿಕ ಮಾಧ್ಯಮದಲ್ಲಿ ರಾಹುಲ್ ಹಂಚಿಕೊಂಡಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

 

RELATED ARTICLES

Related Articles

TRENDING ARTICLES