Friday, December 27, 2024

ತಂದೆ ಅಂತ್ಯ ಸಂಸ್ಕಾರ: ಮಗನ ದಾರಿ ಕಾಯುತ್ತಿರೋ ಕುಟುಂಬಸ್ಥರು

ರಾಮನಗರ : ಅಪ್ಪನ ಅಂತ್ಯಸಂಸ್ಕಾರಕ್ಕಾಗಿ ಹಲವು ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದ ಮಗನ ದಾರಿ ಕಾಯುತ್ತ ಕುಟುಂಬಸ್ಥರು ಮೃತ ದೇಹದ ಮುಂದೆ ಎದುರು ನೋಡುತ್ತಿರುವ ಮನಕಲಕುವ ಘಟನೆ ರಾಮನಗರ ಗುನ್ನೂರು ಗ್ರಾಮದಲ್ಲಿ ನಡೆದಿದೆ.

ರಾಮನಗರ ತಾಲ್ಲೂಕಿನ ಗನ್ನೂರು ಗ್ರಾಮದ ಗವಿಸಿದ್ದಯ್ಯ ಮೃತಪಟ್ಟ ವ್ಯಕ್ತಿ,  ಕಳೆದ ರಾತ್ರಿ ವಯೋಸಹಜವಾಗಿ ಸಾವನ್ನಪ್ಪಿದ್ದರು. ತಂದೆಯ ಅಂತ್ಯ ಸಂಸ್ಕಾರ ನಡೆಸಲು ಮಗನ ದಾರಿ ಕಾಯುತ್ತ ಮೃತ ದೇಹದ ಮುಂದೆ ಕುಟುಂಬಸ್ಥರ ಕಾಯುತ್ತ ಕುಳಿತಿದ್ದಾರೆ.

ಇದನ್ನು ಓದಿ : ಎಸ್​ಸಿಪಿ, ಟಿಎಸ್​ಪಿ ಸಭೆ ನಾಳೆ : ಸಿಎಂ ಭೇಟಿಯಾದ ಪರಮೇಶ್ವರ್​, ಪ್ರಿಯಾಂಕ್​ ಖರ್ಗೆ!

ಮೃತ ಗವಿಸಿದ್ದಯ್ಯ ರ ಮಗ ಸುರೇಶ್ ಎಂಬುವವರು ಕಳೆದ 5 ವರ್ಷಗಳ ಹಿಂದೆಯೇ ಮನೆ ಬಿಟ್ಟು ಹೋಗಿದ್ದು, ಇಷ್ಟು ವರ್ಷಗಳಾದರು ಮನೆಗೆ ವಾಪಸ್ ಆಗಿರಲಿಲ್ಲ,  ಕುಟುಂಬಸ್ಥರು ಎಷ್ಟೇ ಹುಡುಕಾಟ ನೆಡೆಸಿದ್ದರು ಸುರೇಶ್ ಕುರಿತು ಯಾವುದೇ ಮಾಹಿತಿಯೂ ಇಲ್ಲದೇ ಕಂಗಾಲಾಗಿದ್ದರು, ತಂದೆ ಸಾವಿನ ಸುದ್ದಿ ಕೇಳಿಯಾದರೂ ಅಂತಿಮ ಸಂಸ್ಕಾರಕ್ಕೆ ಮಗ ಬರಬಹುದು ಎಂದು ಕುಟುಂಬಸ್ಥರು ಮಗನ ದಾರಿ ಕಾಯುತ್ತ ಕುಳಿತರುವ ದೃಶ್ಯಗಳು ಜನರ ಮನಕಲಕುವಂತಿತ್ತು.

RELATED ARTICLES

Related Articles

TRENDING ARTICLES