Sunday, December 22, 2024

ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ನಟ ಸುದೀಪ್​

ತಿರುಪತಿ : ಹಲವು ದಿನಗಳ ಬಳಿಕ ಸ್ಯಾಂಡಲ್​​ವುಡ್​ ನಟ ಕಿಚ್ಚ ಸುದೀಪ್​ ದಂಪತಿ ತಿರುಪತಿಗೆ ಭೇಟಿ ನೀಡಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಸುದೀಪ್ ನಟನೆಯ ಹೊಸ ಸಿನಿಮಾದ ಚಿತ್ರೀಕರಣ ಶುರುವಾಗಲಿದೆ. ಅದಕ್ಕೂ ಮುನ್ನ ಸುದೀಪ್ ತಿರುಪತಿಗೆ ಭೇಟಿ ನೀಡಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಈ ವೇಳೆ ತಮ್ಮ ನೆಚ್ಚನ ನಟನ ಜೊತೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು.

ಕಿಚ್ಚ ಸುದೀಪ್ ಮತ್ತು ನಿರ್ಮಾಪಕ ಕುಮಾರ್ ಕಾಲ್‌ಶೀಟ್ ಕದನಕ್ಕೆ ಪೂರ್ಣ ವಿರಾಮ ಬೀಳುವ ಮುಂಚಯೇ ಕಿಚ್ಚನ 46 ಸಿನಿಮಾಗೆ ಸಿದ್ಧತೆ ನಡೆಯುತ್ತಿದೆ. ಕುಮಾರ್ ಜೊತೆಗಿನ ಸಂಧಾನದ ಮಾತುಕತೆ ನಡೆಯುತ್ತಿದೆ. ಈ ವಾರದ ಅಂತ್ಯದಲ್ಲಿ ಎಲ್ಲದಕ್ಕೂ ಉತ್ತರ ಸಿಗಲಿದೆ ಎಂದು ಹೇಳಲಾಗಿತ್ತು. ವಿವಾದ ಬದಿಗಿಟ್ಟು ಕಾಯಕವೇ ಕೈಲಾಸ ಅಂತಾ ಸುದೀಪ್ ಹೊಸ ಸಿನಿಮಾದ ಶೂಟಿಂಗ್‌ನತ್ತ ಮುಖ ಮಾಡಿದ್ದಾರೆ.‌

‘ವಿಕ್ರಾಂತ್ ರೋಣ’ ಸಿನಿಮಾದ ಬಳಿಕ ತನ್ನ ಜೊತೆ ಸಿನಿಮಾ ಮಾಡುತ್ತಾರೆ ಎಂದು ಮಾತುಕತೆ ಆಗಿತ್ತು. ಹಣ ಪಡೆದು ಸಾಕಷ್ಟು ಸಮಯದಿಂದ ಕಾಲ್‌ಶೀಟ್ ನೀಡದೇ ಸುದೀಪ್ ಸತಾಯಿಸುತ್ತಿದ್ದಾರೆ ಎಂದು ನಿರ್ಮಾಪಕ ಕುಮಾರ್  ಆರೋಪಿಸಿದ್ದರು. ಇದಾದ ಬಳಿಕ ಸುದೀಪ್ ಕಾನೂನು ಸಮರ ಸಾರಿದ್ದರು. ಬಳಿಕ ರವಿಚಂದ್ರನ್  ಅವರ ಜೊತೆ ಕುಮಾರ್-ಸುದೀಪ್ ಇಬ್ಬರ ಸಂಧಾನ ಸಭೆ ನಡೆದಿತ್ತು. ಆದರೆ ಇದು ಇನ್ನೂ ಅಂತಿಮ ಹಂತಕ್ಕೆ ತಲುಪಿಲ್ಲ. ಕೊನೆಯ ಸಂಧಾನ ಸಭೆಯಲ್ಲಿ ಶಿವಣ್ಣ  ಕೂಡ ಭಾಗಿಯಾಗಲಿದ್ದಾರೆ. ಬಳಿಕ ಕಾಲ್‌ಶೀಟ್ ಕದನಕ್ಕೆ ಅಂತ್ಯ ಸಿಗಲಿದೆ.

RELATED ARTICLES

Related Articles

TRENDING ARTICLES